ಕಾಪು: ದಿನಾಂಕ: 10-11-2023(ಹಾಯ್ ಉಡುಪಿ ನ್ಯೂಸ್) ಉದ್ಯಾವರ ಗ್ರಾಮದ ಚಕ್ಷುಮತಿ ಹೊಳೆಯಿಂದ ಮರಳನ್ನು ಕಳ್ಳತನ ಮಾಡುತ್ತಿದ್ದ ವ್ಯಕ್ತಿ ಯನ್ನು ಕಾಪು ವ್ರತ್ತ ದ ಸಿಪಿಐ ಯವರಾದ ಜಯಶ್ರೀ ಎಸ್ ಮಾನೆ ಯವರು ಬಂಧಿಸಿದ್ದಾರೆ.
ಕಾಪು ವೃತ್ತದ ಸಿ.ಪಿ.ಐ ಯವರಾದ ಜಯಶ್ರೀ ಎಸ್ ಮಾನೆ ರವರು ದಿನಾಂಕ: 10.11.2023 ರಂದು ಕಾಪು ಪೊಲೀಸ್ ಠಾಣೆಯ ಸರಹದ್ದಿನಲ್ಲಿ ಬೆಳಿಗ್ಗೆ ರೌಂಡ್ಸ್ ಕರ್ತವ್ಯದಲ್ಲಿರುವಾಗ ಮಾಹಿತಿದಾರರೊಬ್ಬರು ಕರೆ ಮಾಡಿ ಉದ್ಯಾವರ ಗ್ರಾಮದ ಬೊಳ್ಜೆ ಚಕ್ಷುಮತಿ ಹೊಳೆಯಿಂದ ಯಾರೋ ಒಬ್ಬಾತನು ಮರಳನ್ನು ಕಳವು ಮಾಡಿ, ಅಲ್ಲೇ ಪಕ್ಕದ ಜಲಜ ಎಂಬವರ ಜಾಗದಲ್ಲಿ ಸಂಗ್ರಹ ಮಾಡುತ್ತಿದ್ದಾನೆ ಎಂಬುದಾಗಿ ಮಾಹಿತಿ ನೀಡಿದಂತೆ, ಮಾಹಿತಿ ಬಂದ ಸ್ಥಳಕ್ಕೆ ಕೂಡಲೇ ದಾಳಿ ನಡೆಸಿ ಮರಳು ಸಂಗ್ರಹಿಸುತ್ತಿದ್ದ ಉದ್ಯಾವರ ನಿವಾಸಿ ರಾಜೇಶ್ ಎಂ, (36) ಎಂಬವನನ್ನು ಬಂಧಿಸಿ ವಶಕ್ಕೆ ಪಡೆದಿದ್ದಾರೆ.
ಆತನು ಹೊಳೆಯಿಂದ ಮರಳನ್ನು ತೆಗೆಯಲು ಗಣಿ ಇಲಾಖೆಯಿಂದ ಪರವಾನಿಗೆ ಪಡೆಯದೇ ಉದ್ಯಾವರ ಗ್ರಾಮದ ಚಕ್ಷುಮತಿ ಹೊಳೆಯಿಂದ ಸರಕಾರಿ ಸ್ವತ್ತಾದ ಮರಳನ್ನು ತನ್ನ ಸ್ವಂತ ಲಾಭಕ್ಕಾಗಿ ಕಳವು ಮಾಡಿ ಸಂಗ್ರಹಿಸಿ ರಾಶಿ ಹಾಕಿ ಮತ್ತು ಕೆಎ20ಎಎ.7208 ನಂಬ್ರದ 407 ಟೆಂಪೋವನ್ನು ಮರಳು ಸಾಗಾಟ ಮಾಡಲು ಬಳಸುತ್ತಿರುವುದು ಕಂಡು ಬಂದ ಕಾರಣ ಆರೋಪಿ ರಾಜೇಶ್.ಎಂ.ನನ್ನು ಸ್ಥಳದಲ್ಲೇ ಬಂಧಿಸಿ ಆರೋಪಿಯು ಕತ್ಯಕ್ಕೆ ಬಳಸಿದ್ದ KA-20-AA-7208ನೇ ನಂಬ್ರದ TATA 407 ಟೆಂಪೋ -01 , ಕಬ್ಬಿಣದ ಬಕೆಟ್ -1, ಪ್ಲಾಸ್ಟಿಕ್ ಬುಟ್ಟಿ-1 ಮತ್ತು ಸುಮಾರು 3000 ರೂಪಾಯಿ ಮೌಲ್ಯದ ಒಂದು ಯುನಿಟ್ ಮರಳನ್ನು ಸ್ವಾಧೀನಪಡಿಸಿಕೊಂಡಿರುತ್ತಾರೆ.
ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಕಲಂ: 379 ಐ.ಪಿ.ಸಿ ಯಂತೆ ಪ್ರಕರಣ ದಾಖಲಾಗಿದೆ.