ಕಾರ್ಕಳ: ದಿನಾಂಕ: 10-11-2023(ಹಾಯ್ ಉಡುಪಿ ನ್ಯೂಸ್) ವಿವಾಹಿತ ಮಹಿಳೆ ಯೋರ್ವಳು ಗಂಡನ ಕಿರುಕುಳ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕಾರ್ಕಳ ನಿವಾಸಿ ಸವಿತಾ ಎಂಬವರ ತಂಗಿ ಅಶ್ವಿನಿ ಪ್ರಾಯ 26 ವರ್ಷ ಇವಳಿಗೆ ಒಂದೂವರೇ ವರ್ಷಗಳ ಹಿಂದೆ ಹಿರ್ಗಾನ ಗ್ರಾಮದ ನೆಲ್ಲಿಕಟ್ಟೆ ನಿವಾಸಿ ಮನೋಜ್ ಪ್ರಾಯ 25 ವರ್ಷ ಎಂಬವನೊಂದಿಗೆ ಮದುವೆ ಮಾಡಿಸಿರುತ್ತೇವೆ ಎಂದು ಸವಿತಾ ರವರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಹೇಳಿ ಕೊಂಡಿದ್ದಾರೆ.
ಮದುವೆಯಾದ ನಂತರ ಅಶ್ವಿನಿಯು ಗಂಡನ ಮನೆಯಲ್ಲಿಯೇ ಇದ್ದು 2-3 ಬಾರಿ ತಾಯಿ ಮನೆಗೆ ಬಂದಿರುತ್ತಾಳೆ ಎಂದಿದ್ದಾರೆ, ಮನೆಗೆ ಬಂದಾಗ ಗಂಡ ಮನೋಜನು ತನಗೆ ಹೊಡೆದು ಕಿರುಕುಳ ನೀಡುತ್ತಿದ್ದಾನೆ ಎಂದು ತಿಳಿಸುತ್ತಿದ್ದಳು ಎಂದು ದೂರಿನಲ್ಲಿ ತಿಳಿಸಿದ್ದಾರೆ, ಅಶ್ವಿನಿಯು ಗಂಡ ಮನೋಜನು ಪದೇ ಪದೇ ಕಿರುಕುಳ ನೀಡಿ ನಿನ್ನ ಜೊತೆ ಬಾಳಲು ನನಗೆ ಇಷ್ಟ ಇರುವುದಿಲ್ಲ, ನೀನು ಎಲ್ಲಿಯಾದರೂ ಹೋಗಿ ಸಾಯಿ ಎಂದು ಯಾವಾಗಲೂ ಬೈಯುತ್ತಿರುವ ವಿಚಾರವನ್ನು ಮನೆಯಲ್ಲಿ ಹೇಳಿದ್ದಳು , ಅಶ್ವಿನಿಯು ಅವಳ ಗಂಡ ಮನೋಜನ ದುಷ್ಪ್ರೇರಣೆಯಿಂದ,ಅವನ ಹಿಂಸೆಯಿಂದ ಬೇಸತ್ತು ದಿನಾಂಕ 09-11-2023 ರಂದು ಸಂಜೆ ಹಿರ್ಗಾನದಲ್ಲಿನ ಗಂಡನ ಮನೆಯಲ್ಲಿ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾಳೆ ಎಂದು ಅಶ್ವಿನಿಯ ಅಕ್ಕ ಸವಿತಾರವರು ಪೊಲೀಸರಿಗೆ ದೂರು ನೀಡಿದ್ದು ತನ್ನ ತಂಗಿಯ ಸಾವಿಗೆ ಕಾರಣ ನಾದ ಅವಳ ಗಂಡ ಮನೋಜನಿಗೆ ಶಿಕ್ಷೆ ಯಾಗ ಬೇಕೆಂದು ದೂರಿನಲ್ಲಿ ಕೇಳಿ ಕೊಂಡಿದ್ದಾರೆ.
ಈ ಬಗ್ಗೆ ಕಾರ್ಕಳ ನಗರ ಠಾಣೆಯಲ್ಲಿ ಕಲಂ: 306 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.