Spread the love

ಮಲ್ಪೆ: ದಿನಾಂಕ: 09-11-2023(ಹಾಯ್ ಉಡುಪಿ ನ್ಯೂಸ್) ವಾಹನಗಳ ಮಾರಾಟಗಾರ ದಲ್ಲಾಳಿಯೋರ್ವ ಕಾರನ್ನು ಮಾರಾಟ ಮಾಡಿ ಕೊಡುವುದಾಗಿ ನಂಬಿಸಿ ಕಾರನ್ನು ಪಡೆದು ಕೊಂಡು ಹಣವನ್ನು ನೀಡದೆ ಕಾರನ್ನೂ ವಾಪಾಸು ಮಾಡದೆ ಇದೀಗ ಜೀವ ಬೆದರಿಕೆ ಹಾಕಿದ್ದಾನೆ ಎಂದು ಮಲ್ಪೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಕಿನ್ನಿಮುಲ್ಕಿಯ ನಿವಾಸಿ ಆಲ್ವಿನ್ ಎಂಬವರ ಹೆಂಡತಿ ರಾಜೀವಿ ಮಾರ್ಗರೇಟ್ ರವರು ಕಾರು ಒಂದನ್ನು ಹೊಂದಿದ್ದು ಅವರಿಗೆ ಕಟಪಾಡಿಯ ನಿವಾಸಿಯಾದ ಇಮ್ತಿಯಾಜ್ ಎಂಬವರ ಪರಿಚಯವಿದ್ದು ಆತನು ದಲ್ಲಾಳಿಯಾಗಿ ವಾಹನಗಳ ಮಾರಾಟ ಮಾಡುವ ಕೆಲಸ ಮಾಡಿಕೊಂಡಿದ್ದಾನೆ ಎನ್ನಲಾಗಿದೆ .ಆಲ್ವಿನ್ ರವರು ಇಮ್ತಿಯಾಜ್ ನ ಬಳಿ ತನ್ನ ಕಾರು ಮಾರಾಟ ಮಾಡುವುದಾಗಿ ತಿಳಿಸಿದ್ದಾರೆ ಎಂದಿದ್ದಾರೆ. ಆಗ ಇಮ್ತಿಯಾಜನು ತನ್ನ ಬಳಿ ಒಳ್ಳೆಯ ಬೆಲೆಗೆ ಮಾರಾಟ ಮಾಡುವ ದಾವಣಗೆರೆಯ ಸಮೀರ್ ಎಂಬುವವನ ಪರಿಚಯವಿದ್ದು ಇನ್ನೂ ಬೇರೆ ವಾಹನಗಳನ್ನು ಮಾರಾಟ ಮಾಡುವವರು ಇದ್ದಾರಾ ಎಂದು ಆಲ್ವಿನ್ ರವರ ಬಳಿ ವಿಚಾರಿಸಿದ್ದಾನೆ ಎಂದಿದ್ದಾರೆ.

ಆಗ ಆಲ್ವಿನ್ ರವರು ತನಗೆ  ಪರಿಚಯವಿರುವ ಅಕ್ಬರ್, ನೆಲ್ಸನ್ ಬಾರ್ನಸ್ ಮತ್ತು ಅಜೀಜ್‌ ಅಹಮ್ಮದ್‌  ಇವರುಗಳ ಬಳಿ ಇರುವ ಕಾರುಗಳನ್ನು ಮಾರಾಟ ಮಾಡಲು ಇರುವುದಾಗಿ ಹೇಳಿದ್ದು, ಆಗ ಇಮ್ತಿಯಾಜ್ ನು ತಾನು ದಾವಣಗೆರೆಯ ಸಮೀರ್‌ ಗೆ ಬಂದು ಕಾರುಗಳನ್ನು ನೋಡಿಕೊಂಡು ವ್ಯವಹಾರ ನಡೆಸಲು ಬರಲು ಹೇಳುತ್ತೇನೆ. ಆಗ ನೀವು ಎಲ್ಲರೂ ನಿಮ್ಮ ಕಾರುಗಳನ್ನು ತನ್ನಿ ಒಳ್ಳೆಯ ಬೆಲೆಗೆ ಮಾರಾಟವಾಗುತ್ತದೆ ಎಂದು ಎಲ್ಲರನ್ನೂ ನಂಬಿಸಿರುತ್ತಾನೆ ಎಂದಿದ್ದಾರೆ.

ಅಕ್ಬರ್, ನೆಲ್ಸನ್ ಬಾರ್ನಸ್ ಮತ್ತು ಅಜೀಜ್‌ ಅಹಮ್ಮದ್‌ ರವರಿಗೆ ಜೂನ್ -2023 ರ ಮೊದಲ ವಾರದ ಒಂದು ದಿನ ತಮ್ಮ ಕಾರುಗಳನ್ನು ತೆಗೆದುಕೊಂಡು ಉಡುಪಿ ಕಿನ್ನಿಮೂಲ್ಕಿ ಬಳಿ ಬರಲು ಹೇಳಿ ನಂತರ ಇಮ್ತಿಯಾಜ್‌ನಿಗೆ ಸಮೀರ್ ನನ್ನು   ಕರೆದುಕೊಂಡು ಬರುವಂತೆ ಹೇಳಿರುತ್ತಾರೆ ಎಂದಿದ್ದಾರೆ.

ಆಲ್ವಿನ್ ರವರ , ಅಕ್ಬರ್,  ನೆಲ್ಸನ್ ಬಾರ್ನಸ್ , ಅಜೀಜ್‌ ಅಹಮ್ಮದ್‌ ಅವರು ಎಲ್ಲರೂ  ಕಾರನ್ನು ಉಡುಪಿ ಕಿನ್ನಿಮೂಲ್ಕಿ ಬಳಿ ತೆಗೆದುಕೊಂಡು ಬಂದಿದ್ದು, ಅಲ್ಲಿ ಇಮ್ತಿಯಾಜ್ ನು ದಾವಣಗೆರೆಯ ಸಮೀರ್ ಹಾಗೂ ಮುಝಾಮಿಲ್ ಎಂಬುವವರನ್ನು ಕರೆದುಕೊಂಡು ಬಂದು ಆಲ್ವಿನ್ ರವರಿಗೆ ಹಾಗೂ ಅವರ ಸ್ನೇಹಿತರಿಗೆ ಪರಿಚಯಿಸಿದ್ದು, ಅವರುಗಳು ತಮ್ಮ ವಾಹನಗಳನ್ನು ತೋರಿಸಿಕೊಟ್ಟಿದ್ದು, ಮಾತುಕತೆಯ ನಂತರ ಸಮೀರ್‌ ನು  ತನ್ನ ಕಾರಿಗೆ ಮುಂಗಡ ಹಣವನ್ನು ಆಲ್ವಿನ್ ರವರ ಹಾಗೂ ಇನ್ನುಳಿದವರುಗಳ ಖಾತೆಗೆ ಜಮೆ ಮಾಡುವುದಾಗಿ ತಿಳಿಸಿ ಕಾರುಗಳನ್ನು ತೆಗೆದುಕೊಂಡು ಹೋಗಿರುತ್ತಾರೆ ಎಂದಿದ್ದಾರೆ.

ಆ ಬಳಿಕ ಸಮೀರ್‌ ಗೆ  ಪೋನ್ ಕರೆ ಮಾಡಿ ಕಾರು ಮಾರಾಟ ಮಾಡಿದ ಬಗ್ಗೆ ಹಣ ಕೇಳಿದಾಗ ಹಣ ಕೊಡಲು ಸತಾಯಿಸುತ್ತಾ ಬಂದಿದ್ದು, ಆನಂತರ ಹಣವೂ ಕೊಡುವುದಿಲ್ಲ. ಕಾರನ್ನೂ ವಾಪಾಸು ಮಾಡುವುದಿಲ್ಲ ಎಂಬುದಾಗಿ ಉಡಾಫೆಯಾಗಿ ಮಾತನಾಡಿರುತ್ತಾನೆ ಎಂದು ದೂರಿದ್ದಾರೆ. 

ಈ ಬಗ್ಗೆ ಇಮ್ತಿಯಾಜ್ ನನ್ನು  ಸಂಪರ್ಕಿಸಲು ಪ್ರಯತ್ನಿಸಿದರೆ ಆತನು ಕರೆಯನ್ನೇ ಸ್ವೀಕರಿಸದೇ ಇದ್ದು,  ಬಳಿಕ ಒಮ್ಮೆ ಸಂಪರ್ಕಕ್ಕೆ ಸಿಕ್ಕಿದ್ದು ಆಲ್ವಿನ್ ರವರು ತನ್ನ ಕಾರನ್ನು ವಾಪಾಸು ನೀಡುವಂತೆ ಹೇಳಿ ಪಡೆದ ಮುಂಗಡ ಹಣವನ್ನು ಇಮ್ತಿಯಾಜ್‌ ಗೆ ವಾಪಾಸು ಮಾಡಿದ್ದಾರೆ ಎಂದಿದ್ದಾರೆ. ಆ ನಂತರ ಇಮ್ತಿಯಾಜ್‌ ನು ಕಾರನ್ನು ವಾಪಾಸು ಕೊಡಿಸುವುದಾಗಿ ನಂಬಿಸಿ ಬೆಂಗಳೂರು, ರಾಣೆಬೆನ್ನೂರು, ರಾಯಚೂರು ಕಡೆಗಳಿಗೆ ಕರೆದುಕೊಂಡು ಹೋಗಿರುತ್ತಾನೆ. ಆದಾರೂ ಕಾರು ವಾಪಾಸು ಮಾಡದೇ ಇದೀಗ ಜೀವ ಬೇದರಿಕೆ ಒಡ್ಡುತ್ತಿದ್ದಾನೆ ಎಂದು ಆಲ್ವಿನ್ ರವರು ಪೊಲೀಸರಿಗೆ ದೂರು ನೀಡಿದ್ದಾರೆ.

ಆಲ್ವಿನ್ ರವರು ನೀಡಿದ ದೂರಿನಂತೆ ಮಲ್ಪೆ ಪೊಲೀಸ್‌ ಠಾಣೆಯಲ್ಲಿ ಕಲಂ: 406, 420, 424, 504, 506 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.

error: No Copying!