Spread the love

ಉಡುಪಿ: ದಿನಾಂಕ: 08/11/2023 (ಹಾಯ್ ಉಡುಪಿ ನ್ಯೂಸ್) ಯಾವುದೇ ಪರವಾನಿಗೆ ಇಲ್ಲದೆ ಅಪಾಯಕಾರಿಯಾಗಿ ಸುಡುಮದ್ದು ಸಾಗಿಸುತ್ತಿದ್ದ ವ್ಯಕ್ತಿ ಯನ್ನು ಉಡುಪಿ ನಗರ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಮಂಜಪ್ಪ ಡಿ ಆರ್ ರವರು ಬಂಧಿಸಿದ್ದಾರೆ.

ಉಡುಪಿ ನಗರ ಪೊಲೀಸ್ ಠಾಣೆ ಪೊಲೀಸ್ ಉಪ ನಿರೀಕ್ಷಕರಾದ ಮಂಜಪ್ಪ ಡಿ.ಆರ್ ಅವರಿಗೆ ದಿನಾಂಕ:07-11-2023 ರಂದು ವಾಹನವೊಂದರಲ್ಲಿ ಯಾವುದೇ ಪರವಾನಿಗೆ ಇಲ್ಲದೇ ಸುಡುಮದ್ದುಗಳನ್ನು (ಪಟಾಕಿಗಳನ್ನು) ಸಾಗಾಟದ ಸಲುವಾಗಿ ಲೋಡ್‌ ಮಾಡುತ್ತಿರುವುದಾಗಿ ಸಾರ್ವಜನಿಕರಿಂದ ದೊರೆತ ಮಾಹಿತಿಯಂತೆ ಕೂಡಲೇ ಸ್ಥಳಕ್ಕೆ ದಾಳಿ ನಡೆಸಿ, ಒಟ್ಟು 455  ಕೆ.ಜಿ ತೂಕದ ರೂಪಾಯಿ 87,500/- ರೂಪಾಯಿ ಮೌಲ್ಯದ ಪಟಾಕಿ ಸುಡುಮದ್ದುಗಳನ್ನು ಹಾಗೂ  ಸಾಗಾಟಕ್ಕೆ ಬಳಸಿದ KA-20-D-7248ನೇ  ಟಾಟಾ ಏಸ್‌ಮೆಗಾ ವಾಹನವನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.

ಪ್ರಕಾಶ್‌, ಬಡಾನಿಡಿಯೂರು ಎಂಬಾತನು ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದೇ ಹಾಗೂ ಪರವಾನಿಗೆ ಇಲ್ಲದೇ ಅಕ್ರಮವಾಗಿ ಪಟಾಕಿ ಸ್ಪೋಟಕಗಳನ್ನು ಮಾನವ ಪ್ರಾಣಕ್ಕೆ ಅಪಾಯ ಉಂಟಾಗುವ ರೀತಿಯಲ್ಲಿ ಸ್ವಾಧೀನ ಹೊಂದಿರುವುದಲ್ಲದೆ ಈ ಪಟಾಕಿ ದಾಸ್ತಾನಿನಿಂದ ಬೆಂಕಿ ಅವಘಡ ಸಂಭವಿಸಿ ಮಾನವ ಪ್ರಾಣಕ್ಕೆ ಅಪಾಯ ಉಂಟಾಗುವ ಸಾಧ್ಯತೆಯ ಬಗ್ಗೆ ನಿರ್ಲಕ್ಷ್ಯ  ವಹಿಸಿರುತ್ತಾನೆ ಎಂದು ಆರೋಪಿಸಲಾಗಿದೆ.

ತಮಿಳುನಾಡಿನ ಶಿವಕಾಶಿಯ ಸುಪ್ರಿಂ ಫೈರ್‌ವರ್ಕ್ಸ್‌ಫ್ಯಾಕ್ಟರಿಯವರು ಪರವಾನಿಗೆ ಇಲ್ಲದ ವ್ಯಕ್ತಿಗೆ ಅಕ್ರಮವಾಗಿ ಪಟಾಕಿ ಸ್ಫೋಟಕಗಳನ್ನು ಮಾನವ ಪ್ರಾಣಕ್ಕೆ ಅಪಾಯ ಉಂಟಾಗುವ ರೀತಿಯಲ್ಲಿ ಮಾರಾಟ ಮಾಡಿರುತ್ತಾರೆ ಎಂದು ದೂರಲಾಗಿದೆ.

ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ ಕಲಂ: 9ಬಿ(1)(b) ಕರ್ನಾಟಕ ಎಕ್ಸ್ ಪ್ಲೋಸಿವ್ ಆಕ್ಟ್ 1884 ಮತ್ತು 286 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.

error: No Copying!