Spread the love

ಬ್ರಹ್ಮಾವರ: ದಿನಾಂಕ :07-11-2023 (ಹಾಯ್ ಉಡುಪಿ ನ್ಯೂಸ್) ಚರಂಡಿ ವಿಷಯದಲ್ಲಿ ಗಲಾಟೆ ಎಬ್ಬಿಸಿದ ವ್ಯಕ್ತಿ ಯೋರ್ವನು ಅದೇ ವಿಷಯದಲ್ಲಿ ಪುನಃ ಹಲ್ಲೆ ನಡೆಸಿ ಜೀವಬೆದರಿಕೆ ಹಾಕಿರುವ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಬ್ರಹ್ಮಾವರ, ಹಾರಾಡಿ ಗ್ರಾಮದ ನಿವಾಸಿ ಸಚಿನ್ (37) ಎಂಬವರು ಮತ್ತು ಅವರ ಪರಿಚಯದ  ಜಯಕರ  ಎಂಬುವವರ ನಡುವೆ ರಸ್ತೆ ಚರಂಡಿ ಮಾಡುವಾಗ ರಸ್ತೆ ಬ್ಲಾಕ್ ಮಾಡಿದ ವಿಷಯಕ್ಕೆ  ಮಾತಿನ ಚಕಮಕಿ ನಡೆದು ಜಗಳವಾಗಿತ್ತು ಎನ್ನಲಾಗಿದೆ.

ದಿನಾಂಕ 06/11/2023 ರಂದು ಸಚಿನ್ ರವರು ಎಂದಿನಂತೆ ತಮ್ಮ ಕೆಲಸ ಮುಗಿಸಿ ಸಮಯ ಸುಮಾರು ಸಂಜೆ 7.30 ಗಂಟೆಗೆ ಹಾರಾಡಿಯ ಶಾಲೆಯ ಬಳಿ ರಸ್ತೆಯಲ್ಲಿ  ವಾಕಿಂಗ್ ಹೋಗುತ್ತಿರುವಾಗ ಜಯಕರನು ಸಚಿನ್ ರವರನ್ನು ಕರೆದು ನಿಲ್ಲುವಂತೆ ಹೇಳಿ ಅವಾಚ್ಯವಾಗಿ ಬೈದು ಕಾಲರ್‌ ಹಿಡಿದು ಕೈಯಿಂದ ದೂಡಿ ಮರದ ರೀಪ್ ನಿಂದ ಹಲ್ಲೆ ಮಾಡಿ ನಿನ್ನನ್ನು ಕೊಲ್ಲದೆ ಬಿಡುವುದಿಲ್ಲಾ ಎಂದು ಬೆದರಿಕೆ ಹಾಕಿರುತ್ತಾನೆ ಎಂದು ಸಚಿನ್ ಪೊಲೀಸರಿಗೆ ದೂರಿದ್ದಾರೆ. ನಂತರ ಸಚಿನ್ ರವರ ಸ್ನೇಹಿತರು ಅಲ್ಲಿಗೆ ಬಂದು ಉಪಚರಿಸಿ, ಚಿಕಿತ್ಸೆಯ ಬಗ್ಗೆ ಬ್ರಹ್ಮಾವರದ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆಯಲ್ಲಿ ಕಲಂ: 323, 324, 504, 506 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.

error: No Copying!