Spread the love

ಬೈಂದೂರು: ದಿನಾಂಕ: 07-11-2023(ಹಾಯ್ ಉಡುಪಿ ನ್ಯೂಸ್) ಶಿರೂರು ಮೇಲ್ಪಂಕ್ತಿ ಅಂಬೇಡ್ಕರ್ ಕಾಲೋನಿಯಲ್ಲಿ ವಾಸಿಸುತ್ತಿದ್ದ ಪರಿಶಿಷ್ಟ ಜಾತಿಯ ಕುಟುಂಬಗಳ ಮನೆಯ ಸುತ್ತಲಿನ ಮಣ್ಣನ್ನು ಈರ್ವರು ವ್ಯಕ್ತಿ ಗಳು ಜೆಸಿಬಿಯಿಂದ ಅಗೆದು ತೆಗೆದು ಮನೆಯನ್ನು ಶಿಥಿಲ ಗೊಳಿಸಿದ್ದಾರೆ ಎಂದು ಬೈಂದೂರು ಪೊಲೀಸ ರಿಗೆ ದೂರಲಾಗಿದೆ.

ಬೈಂದೂರು ತಾಲೂಕು, ಶಿರೂರು ಗ್ರಾಮದ ಶಿರೂರು ಮೇಲ್ಪಂಕ್ತಿ ಅಂಬೇಡ್ಕರ್  ಕಾಲೋನಿಯಲ್ಲಿ ಕಳೆದ 70-75 ವರ್ಷ ಗಳಿಂದ ಹಲವು ಪರಿಶಿಷ್ಟ ಜಾತಿಯ ಕುಟುಂಬಗಳು ವಾಸವಾಗಿದ್ದಾರೆ ಎನ್ನಲಾಗಿದೆ. ದಿನಾಂಕ: 24/10/2023 ರ ಸಂಜೆ 5:00 ಗಂಟೆಗೆ ಆಪಾದಿತರಾದ ರಾಮಕೃಷ್ಣ ಮತ್ತು ರಾಮನಾಥ ಎಂಬವರುಗಳು ಜೆ.ಸಿ.ಬಿ ಮತ್ತು ಹಿಟಾಚಿಯನ್ನು ತಂದು ಅವರ ಮನೆಯ ಹತ್ತಿರದ ಮಣ್ಣು ತೆಗೆದು ಮನೆಯನ್ನು ಶಿಥಿಲಗೊಳಿಸಿರುವುದಲ್ಲದೇ  ಅದನ್ನು ಪ್ರಶ್ನಿಸಲು ಹೋದಾಗ ಮಂಗಳ (45) ಎಂಬವರಿಗೆ  ಹಾಗೂ  ಅಲ್ಲಿ ವಾಸವಾಗಿರುವ ಗಿರಿಜಾ , ಸುಬ್ಬ, ಕ್ರಿಷ್ಣಿ, ಮೀನಾಕ್ಷೀ  , ಮತ್ತು ಜಗನ್ನಾಥ ಎಂಬವರುಗಳಿಗೆ ಕೊಲೆ ಮಾಡಿಸುತ್ತೇನೆ ಎಂದು ಬೆದರಿಕೆ  ಹಾಕಿ ಹೋಗಿರುತ್ತಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆಯಲ್ಲಿ   ಕಲಂ:  504, 506 ಐ.ಪಿ.ಸಿ ಮತ್ತು 3(1)(r) (s)(z), 3(2) (va) SC /ST (POA) ACT-2015 ರಂತೆ ಪ್ರಕರಣ ದಾಖಲಾಗಿದೆ.

error: No Copying!