ಬ್ರಹ್ಮಾವರ: ದಿನಾಂಕ : 07-11-2023 (ಹಾಯ್ ಉಡುಪಿ ನ್ಯೂಸ್) ವಾರಂಬಳ್ಳಿ ಗ್ರಾಮದ ಅಂಬೇಡ್ಕರ್ ಭವನವನ್ನು ಕೆಲವು ವ್ಯಕ್ತಿಗಳು ಮದ್ಯಪಾನ ಪಾರ್ಟಿ ಮಾಡಲು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ವಾರಂಬಳ್ಳಿ ಗ್ರಾಮದ ತೆಂಕುಬಿರ್ತಿಯ ಅಂಬೇಡ್ಕರ್ ಭವನದಲ್ಲಿ ದಿನಾಂಕ:05-11-2023 ರಂದು ಶಾಮರಾಜ್ ಬಿರ್ತಿ ಎಂಬವರು ಅವರ ಮಗ ರಾಷ್ಟ್ರಿಯ ಕ್ರೀಡಾಕೂಟದಲ್ಲಿ ಆಯ್ಕೆಯಾಗಿರುವ ಉದ್ದೇಶದಿಂದ ಅಭಿನಂದನ ಸಮಾರಂಭ ಹಮ್ಮಿಕೊಂಡು ಕಾರ್ಯಕ್ರಮ ಮುಗಿದ ಬಳಿಕ ಅಂಬೇಡ್ಕರ್ ಭವನದಲ್ಲಿ ಶಾಮರಾಜ್ ಬಿರ್ತಿ ಹಾಗೂ ಸುರೇಶ್, ಶಿವ ಮತ್ತು ಪ್ರಶಾಂತ್ ಎಂಬವರು ತಮ್ಮ ಸ್ನೇಹಿತರೊಂದಿಗೆ ಸೇರಿ ಕೊಂಡು ಪಂಚಾಯತಿಯ ಅಥವಾ ಸಂಬಂಧ ಪಟ್ಟ ಇಲಾಖೆಯಿಂದ ಅನುಮತಿ ಪಡೆಯದೇ ಅಂಬೇಡ್ಕರ್ ಭವನಕ್ಕೆ ಅತಿಕ್ರಮ ಪ್ರವೇಶ ಮಾಡಿ ಭವನವನ್ನು ದುರುಪಯೋಗ ಪಡಿಸಿಕೊಂಡು ಅದಲ್ಲದೆ ಕಾನೂನು ಬಾಹಿರವಾಗಿ ಮಧ್ಯಪಾನ ಪಾರ್ಟಿಯನ್ನು ಮಾಡುತ್ತಿದ್ದರು ಎಂದು ಪೊಲೀಸರಿಗೆ ದೂರಲಾಗಿದೆ .
ಆ ಸಮಯದಲ್ಲಿ ಸವಿತಾ (51 ) ವಾರಂಬಳ್ಳಿ ಎಂಬವರು ಸ್ಥಳಕ್ಕೆ ಹೋಗಿ ವೀಡಿಯೊ ಮಾಡಲು ಹೋದಾಗ ಈ ನಾಲ್ವರು ಇನ್ನಿತರರ ಜೊತೆ ಸೇರಿ ಅವರಿಗೆ ಬೆದರಿಕೆ ಹಾಕಿ ಅವಾಚ್ಯ ಶಬ್ದದಿಂದ ನಿಂದಿಸಿರುತ್ತಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಕಲಂ: 447, 504, 506 ಜೊತೆಗೆ 34 ಐಪಿಸಿ ಮತ್ತು 15 (ಎ) ಕರ್ನಾಟಕ ಅಬಕಾರಿ ಕಾಯ್ದೆ 1965 ರಂತೆ ಪ್ರಕರಣ ದಾಖಲಾಗಿದೆ.