ಉಡುಪಿ: ದಿನಾಂಕ:29-10-2023(ಹಾಯ್ ಉಡುಪಿ ನ್ಯೂಸ್) ಪಾಲಿನ ಬಗ್ಗೆ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿ ಇರುವ ಜಾಗದಲ್ಲಿ ರಸ್ತೆ ಬಿಡ ಬೇಕೆಂದು ಇಬ್ಬರು ವ್ಯಕ್ತಿಗಳು ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ರಫಾಯೆಲ್ ಕೆಸ್ತಲಿನೋ ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ.
ಉಡುಪಿ ನಿವಾಸಿ ರಫಾಯೆಲ್ ಕೆಸ್ತಲಿನೋ (58) ಎಂಬವರು ವಾಸವಿರುವ ಮನೆಯ ಜಾಗವು ಅವರ ಕುಟುಂಬದ ಆಸ್ತಿಯಾಗಿದ್ದು, ಈ ಬಗ್ಗೆ ಪಾಲು ವ್ಯಾಜ್ಯ ಉಡುಪಿ ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿ ಇರುತ್ತದೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ರಫಾಯೆಲ್ ಕೆಸ್ತಲಿನೋ ತಿಳಿಸಿದ್ದಾರೆ.
ದಿನಾಂಕ: 28/10/2023 ರಂದು ಆಸೀಫ್ ಎಂಬವ ಹಾಗೂ ಇನ್ನೋರ್ವ ವ್ಯಕ್ತಿ KA-20 EL-6632 ಮತ್ತು KA-20 EY-5314 ನಂಬ್ರದ ಸ್ಕೂಟರ್ ನಲ್ಲಿ ರಫಾಯೆಲ್ ಕೆಸ್ತಲಿನೋ ರವರ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ, ಸುಧಾಕರ ಫಿಲೋಮಿನಾ ಡಿಸೋಜ ಮತ್ತು ಡೆನ್ನಿಸ್ ಡಿಸೋಜ ರವರಿಂದ ನಾವು ಜಾಗ ಖರೀದಿಸಿದ್ದು, ಈ ಜಾಗಕ್ಕೆ ನಿಮ್ಮ ಜಾಗದಲ್ಲಿ 18 ಅಡಿ ರಸ್ತೆ ಇರುವುದಾಗಿ ತಿಳಿಸಿ, ಆದುದರಿಂದ ಬೇಗ ನಿಮ್ಮ ಮನೆಯ ಒಂದು ಬದಿ ಕಂಪೌಂಡ್ ತೆಗೆದು ರಸ್ತೆ ಮಾಡಿ ಬಿಡಿ, ಇಲ್ಲದಿದ್ದರೆ ನಾವೇ ಜೆಸಿಬಿ ತಂದು ರಸ್ತೆ ಮಾಡುತ್ತೇವೆ, ಆ ಸಂದರ್ಭ ಯಾರಾದರೂ ಅಡ್ಡಬಂದರೆ ಜೆಸಿಬಿಯ ಅಡಿಗೆ ಹಾಕಿ ಸಾಯಿಸುತ್ತೇವೆ ಎಂದು ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ರಫಾಯೆಲ್ ಕೆಸ್ತಲಿನೋ ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಕೃತ್ಯಕ್ಕೆ ಫಿಲೋಮಿನಾ ಡಿಸೋಜ, ಡೆನ್ನಿಸ್ ಡಿಸೋಜ, ಸುಧಾಕರ ಜತ್ತನ್ನ ಮತ್ತು ಜೆಸಿಂತಾ ಕೆಸ್ತಲಿನೋ ಎಂಬವರ ಕುಮ್ಮಕ್ಕೆ ಕಾರಣವಾಗಿರುತ್ತದೆ ಎಂದು ರಫಾಯೆಲ್ ಕೆಸ್ತಲಿನೋ ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಕಲಂ: 447, 506, 109 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.