ಉಡುಪಿ: ದಿನಾಂಕ:28-10-2023 (ಹಾಯ್ ಉಡುಪಿ ನ್ಯೂಸ್) ಉಡುಪಿಯ ಜುವೆಲ್ಲರಿ ಅಂಗಡಿಯೊಂದಕ್ಕೆ ಗ್ರಾಹಕರಂತೆ ಬಂದ ಇಬ್ಬರು ಮಹಿಳೆಯರು ಚಿನ್ನಾಭರಣ ಕಳ್ಳತನ ನಡೆಸಿರುವ ಬಗ್ಗೆ ಅಂಗಡಿ ಮಾಲೀಕರು ತಡವಾಗಿ ಪೊಲೀಸರಿಗೆ ದೂರು ನೀಡಿದ್ದಾರೆ.
ಉಡುಪಿಯ ನಾರಾಯಣ (69) ಎಂಬವರ ಜುವೆಲ್ಲರಿ ಶಾಪ್ ಗೆ ದಿನಾಂಕ 21/10/2023 ರಂದು ಬಂದ ಇಬ್ಬರು ಅಪರಿಚಿತ ಹೆಂಗಸರು ಗ್ರಾಹಕರಂತೆ ಅಂಗಡಿಗೆ ಬಂದು ಅಂಗಡಿಯ ಸಿಬ್ಬಂದಿಗಳೊಂದಿಗೆ ಸ್ವಲ್ಪ ಹೊತ್ತು ಮಾತನಾಡುತ್ತಾ, ರೂಪಾಯಿ 1,68,097/- ಮೌಲ್ಯದ ಚಿನ್ನಾಭರಣವನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ ಎಂದು ಜುವೆಲ್ಲರಿ ಮಾಲಕರು ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಕಲಂ: 379 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.