ಉಡುಪಿ: ದಿನಾಂಕ:16-10-2023(ಹಾಯ್ ಉಡುಪಿ ನ್ಯೂಸ್)
ಉಡುಪಿ ಜಿಲ್ಲಾಡಳಿತದ ನಿರ್ಬಂಧ ವಿದ್ದರೂ ಉಡುಪಿ ಅಂಬೇಡ್ಕರ್ ಯುವ ಸೇನೆಯಿಂದ ಮಹಿಷೋತ್ಸವಕ್ಕೆ ಚಾಲನೆ ನೀಡಲಾಯಿತು.
ಸಂಶೋಧಕ,ಲೇಖಕ ವಿಠಲ ವಗ್ಗನ್ ಮಹಿಷ ಮಹೋತ್ಸವಕ್ಕೆ ಚಾಲನೆ ನೀಡಿದರು.
ಜಿಲ್ಲಾಡಳಿತದಿಂದ ಮಹಿಷೋತ್ಸವ ಆಚರಣೆಗೆ ಬೆನ್ನಿಗೆ ಚೂರಿ ಹಾಕಲಾಗಿದ್ದರೂ ರಾಜ್ಯದಾದ್ಯಂತ ಬೆಂಬಲ ವ್ಯಕ್ತವಾಗಿದೆ , ಪುರಾಣಗಳ ನಾಶಕ್ಕೆ ಕಾರಣರಾದವರಿಂದ ಇದೀಗ ಸಂವಿಧಾನ ತಿರುಚುವ ಯತ್ನ ನಡೆಯುತ್ತಿದೆ. ವೈದಿಕರ ಸಂಸ್ಕೃತಿ ವಿಜ್ರಂಭಿಸುವ ಹಿನ್ನೆಲೆಯಲ್ಲಿ ನಮ್ಮ ಸಮುದಾಯ ಮೌಢ್ಯಕ್ಕೆ ಗುರಿಯಾಗಿದೆ, ಮಹಿಷ ಯಾರು ಎಂಬುದನ್ನು ಈ ಸಮಾಜಕ್ಕೆ ತಿಳಿಸ ಬೇಕಾಗಿದೆ ಎಂದು ಜಯನ್ ಮಲ್ಪೆ ಹೇಳಿದರು.
ದಲಿತ ನಾಯಕ ಜಯನ್ ಮಲ್ಪೆ, ಚಿಂತಕ ನಾರಾಯಣ ಮಣೂರು, ಶ್ರೀರಾಮ ದಿವಾಣ,ಯುವ ಸೇನೆ ಅಧ್ಯಕ್ಷ ಹರೀಶ್ ಸಾಲ್ಯಾನ್, ಲೋಕೇಶ್ ಪಡುಬಿದ್ರಿ, ಶೇಖರ ಹೆಜ್ಮಾಡಿ,ದಯಾನಂದ ಕಪ್ಪೆಟ್ಟು, ಅಮ್ರತ್ ಶೆಣೈ ಮೊದಲಾದವರು ಉಪಸ್ಥಿತರಿದ್ದರು.