Spread the love

ಕೋಟ: ದಿನಾಂಕ 16/10/2023 (ಹಾಯ್ ಉಡುಪಿ ನ್ಯೂಸ್) ಮಣೂರು ಗ್ರಾಮದ ಕೆಳಬೆಟ್ಟು ಎಂಬಲ್ಲಿನ ಸಾರ್ವಜನಿಕ ಸ್ಥಳದಲ್ಲಿ ಕೋಳಿ ಅಂಕ ನಡೆಸುತ್ತಿದ್ದ 9 ಮಂದಿಯನ್ನು ಕೋಟ ಪೊಲೀಸ್‌ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಸುಧಾಪ್ರಭು ರವರು ಬಂಧಿಸಿದ್ದಾರೆ.

ಕೋಟ ಪೊಲೀಸ್‌ಠಾಣೆ ಪೊಲೀಸ್ ಉಪ ನಿರೀಕ್ಷಕರಾದ (ತನಿಖೆ) ಸುಧಾ ಪ್ರಭುರವರು ದಿನಾಂಕ:15-10-2023ರಂದು ಸಂಜೆ ಠಾಣೆಯಲ್ಲಿರುವಾಗ ಬ್ರಹ್ಮಾವರ ತಾಲೂಕು ಮಣೂರು ಗ್ರಾಮದ ಮಣೂರು ಕೆಳಬೆಟ್ಟು ಎಂಬಲ್ಲಿನ ಸಾರ್ವಜನಿಕ ಸ್ಥಳದಲ್ಲಿ ಕೋಳಿ  ಅಂಕ ಜುಗಾರಿ ಆಟ ಆಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ಮಾಹಿತಿ ಬಂದಂತೆ ಕೂಡಲೇ ಸಿಬ್ಬಂದಿಯವರೊಂದಿಗೆ ಕೋಳಿ ಅಂಕ ನಡೆಸುತ್ತಿದ್ದ ಸ್ಥಳಕ್ಕೆ ಧಾಳಿ ನಡೆಸಿದ್ದಾರೆ.

ದಾಳಿ ನಡೆಸಿದಾಗ ಸ್ಥಳದಲ್ಲಿ ಕೋಳಿ ಅಂಕ ಜುಗಾರಿ ಆಟದಲ್ಲಿ ನಿರತರಾಗಿದ್ದ 1) ಆನಂದ ದೇವಾಡಿಗ (53)    2)  ಪುಟ್ಟಣ್ಣ  (65)  3) ಉದಯ (43)   4)  ಪ್ರಕಾಶ್‌‌‌‌‌‌‌‌ (31)   5) ಕೃತಿಕ್‌‌‌‌‌‌‌‌‌‌‌ (27) 6)  ಮನೋಜ್‌‌‌‌‌‌‌‌  (27) 7) ದಾಸ  (60) 8) ಸುಧಾಕರ  ಪೂಜಾರಿ  (48) 9) ಗಣೇಶ್‌‌‌‌‌‌‌‌‌ (34) ಎಂಬ ಆರೋಪಿಗಳನ್ನು ಹಿಡಿದು ಬಂಧಿಸಿ ವಿಚಾರಣೆ ನಡೆಸಿದಾಗ ಅವರೆಲ್ಲರೂ ತಮ್ಮ ಸ್ವಂತ ಲಾಭಕ್ಕಾಗಿ ಕೋಳಿ ಅಂಕ ಜುಗಾರಿ ಆಟ ಆಡುತ್ತಿರುವುದಾಗಿ ತಪ್ಪೊಪ್ಪಿಕೊಂಡಿರುತ್ತಾರೆ ಎನ್ನಲಾಗಿದೆ .

ಆರೋಪಿಗಳನ್ನು ಹಾಗೂ ನಗದು ಒಟ್ಟು 7,140/- ರೂಪಾಯಿಗಳು, ಕೋಳಿ ಅಂಕಕ್ಕೆ ಬಳಸಿದ 3 ಕೋಳಿ ಮತ್ತು 6 ಮೋಟಾರ್‌ಸೈಕಲ್ ಗಳನ್ನು ಪೊಲೀಸರು ಸ್ವಾಧಿನಪಡಿಸಿಕೊಂಡಿದ್ದಾರೆ. ಸ್ವಾದೀನಪಡಿಸಿಕೊಂಡ ಸ್ವತ್ತಿನ ಒಟ್ಟು ಮೌಲ್ಯ ರೂ 309190/- ಆಗಿರುತ್ತದೆ.

ಈ ಬಗ್ಗೆ ಕೋಟ ಪೊಲೀಸ್‌ಠಾಣೆಯಲ್ಲಿ ಕಲಂ: 87, 93 KP ACT ರಂತೆ ಪ್ರಕರಣ ದಾಖಲಾಗಿದೆ.

error: No Copying!