ಶಂಕರನಾರಾಯಣ: ದಿನಾಂಕ :15-10-2023(ಹಾಯ್ ಉಡುಪಿ ನ್ಯೂಸ್) ಹೈಕಾಡಿ ಹಟ್ಟಿಮನೆ ನಿವಾಸಿ ಮಹಿಳೆಯೋರ್ವರನ್ನು ಇಬ್ಬರು ಕಳ್ಳರು ಚಿನ್ನಾಭರಣ ತೊಳೆದು ಕೊಡುತ್ತೇವೆ ಎಂದು ನಂಬಿಸಿ ವಂಚಿಸಿರುವ ಬಗ್ಗೆ ನೊಂದ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ.
ಕುಂದಾಪುರದ ಹಿಲಿಯಾಣ ಗ್ರಾಮದ ಹೈಕಾಡಿ ಹಟ್ಟಿಮನೆ ಬಸವ ನಾಯ್ಕ ಎಂಬವರ ಪತ್ನಿ ಪಾರ್ವತಿ (65) ಎಂಬವರು ಮನೆಯಲ್ಲಿ ಒಬ್ಬರೇ ಇರುವಾಗ ಎರಡು ಜನ ಅಪರಿಚಿತ ವ್ಯಕ್ತಿಗಳು ಬ್ಯಾಗ್ ಹಿಡಿದುಕೊಂಡು ಬಂದು ಮನೆಯ ಅಂಗಳದಲ್ಲಿ ನಿಂತು ಪಾರ್ವತಿ ಅವರ ಕುತ್ತಿಗೆ ಯಲ್ಲಿ ಇದ್ದ ಚಿನ್ನದಕರಿಮಣಿ ಸರವನ್ನು ತೊಳೆದು ಕೊಡುತ್ತೇವೆ ಎಂದು ಹೇಳಿದ್ದು ಅವರನ್ನು ನಂಬಿ ಪಾರ್ವತಿ ಅವರು ಕುತ್ತಿಗೆಯಲ್ಲಿ ಇದ್ದ ಸುಮಾರು 1,50,000/- ರೂ ಮೌಲ್ಯದ ಸುಮಾರು 30 ಗ್ರಾಂ ತೂಕದ ಚಿನ್ನದ ಕರಿ ಮಣಿ ಸರವನ್ನು ತೆಗೆದು ಮನೆಯ ಹೊರಗಡೆಯ ಅಂಗಳದ ಚಿಟ್ಟೆಯ ಮೇಲೆ ಇಟ್ಟಾಗ ಆರೋಪಿತರು ಕುಡಿಯಲು ನೀರು ಬೇಕು ಎಂದು ಹೇಳಿದಾಗ ಪಾರ್ವತಿ ಯವರು ನೀರು ತರಲು ಮನೆಯ ಒಳಗಡೆ ಹೋದಾಗ ಆರೋಪಿಗಳು ಚಿನ್ನದ ಕರಿಮಣಿ ಸರವನ್ನು ಕಳವು ಮಾಡಿಕೊಂಡು ಓಡಿ ಹೋಗಿರುತ್ತಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಕಲಂ: 379 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.