- ಮಲ್ಪೆ: ದಿನಾಂಕ: 15-10-2023 (ಹಾಯ್ ಉಡುಪಿ ನ್ಯೂಸ್) ಮಲ್ಪೆ ಬಸ್ಸು ನಿಲ್ದಾಣದ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ಆಟ ನಡೆಸುತ್ತಿದ್ದ ವ್ಯಕ್ತಿಯನ್ನು ಮಲ್ಪೆ ಪೊಲೀಸ್ ಠಾಣೆಯ ಪಿಎಸ್ಐ ಯವರಾದ ಗುರುನಾಥ ಬಿ. ಹಾದಿಮನಿ ಯವರು ಬಂಧಿಸಿದ್ದಾರೆ.
- ಮಲ್ಪೆ ಪೊಲೀಸ್ ಠಾಣೆಯ ಪಿಎಸ್ಐ ಯವರಾದ ಗುರುನಾಥ ಬಿ ಹಾದಿಮನಿ ಯವರು ದಿನಾಂಕ: 14/10/2023 ರಂದು ಠಾಣೆಯಲ್ಲಿ ಕರ್ತವ್ಯ ದಲ್ಲಿ ಇರುವಾಗ ಮಲ್ಪೆ ಜಂಕ್ಷನ್ ನಲ್ಲಿ ಕರ್ತವ್ಯದಲ್ಲಿದ್ದ ಪಿಸಿ ಮನುಕುಮಾರ್ ರವರು ಕರೆ ಮಾಡಿ ಮಲ್ಪೆ ಬಸ್ ನಿಲ್ದಾಣದ ಬಳಿಯ ಸಾರ್ವಜನಿಕ ಸ್ಥಳದಲ್ಲಿ ವ್ಯಕ್ತಿಯೋರ್ವ ಮಟ್ಕಾ ಜುಗಾರಿ ನಡೆಸುತ್ತಿರುವ ಬಗ್ಗೆ ತಿಳಿಸಿದ್ದು ಕೂಡಲೇ ಪಿಎಸ್ಐ ಯವರು ಮಟ್ಕಾ ಜುಗಾರಿ ಆಟ ಆಡುವಲ್ಲಿಗೆ ಠಾಣಾ ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿದ್ದಾರೆ.
- ದಾಳಿ ನಡೆಸಿದಾಗ ಅಲ್ಲಿ ಮಟ್ಕಾ ಚೀಟಿ ಪಡೆದು ಹಣ ಸಂಗ್ರಹಿಸುತ್ತಿದ್ದವನ್ನು ಬಂಧಿಸಿ ಹಿಡಿದು ವಿಚಾರಣೆ ನಡೆಸಿದಾಗ ಆತನ ಹೆಸರು ಉದಯ ಶೇರಿಗಾರ ಎಂಬುದಾಗಿ ತಿಳಿಸಿದ್ದು ತಾನು ಸ್ವಂತ ಲಾಭಕ್ಕಾಗಿ ಮಟ್ಕಾ ಜುಗಾರಿ ಆಟವನ್ನು ನಡೆಸುತ್ತಿರುವುದಾಗಿ ತಪ್ಪೋಪ್ಪಿಕೊಂಡಿರುತ್ತಾನೆ ಎನ್ನಲಾಗಿದೆ.
- ಆತನಿಂದ ಮಟ್ಕಾ ಜುಗಾರಿ ಆಟಕ್ಕೆ ಬಳಸಿದ ಒಟ್ಟು 1160 /-ರೂಪಾಯಿ ನಗದು ,ಮಟ್ಕಾ ಚೀಟಿ-1 ಹಾಗೂ ಬಾಲ್ ಪೆನ್ನು -1 ನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.
- ಈ ಬಗ್ಗೆ ಮಲ್ಪೆ ಪೊಲಿಸ್ ಠಾಣೆಯಲ್ಲಿ ಕಲಂ 78 (I) (III) K P Act ರಂತೆ ಪ್ರಕರಣ ದಾಖಲಾಗಿದೆ.