Spread the love

  • ಉಡುಪಿ: ದಿನಾಂಕ: 09-10-2023(ಹಾಯ್ ಉಡುಪಿ ನ್ಯೂಸ್) ಯುವಕರ ಗುಂಪೊಂದು ರಿಕ್ಷಾ ಚಾಲಕರಿಗೆ ಹಲ್ಲೆ ಮಾಡಿರುವ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
  • ಉಡುಪಿಯಲ್ಲಿ ಆಟೋ ಚಾಲಕರಾಗಿ ಕೆಲಸ ಮಾಡಿಕೊಂಡಿರುವ ಸತೀಶ್ ಎಂಬವರು ದಿನಾಂಕ: 07/10/2023 ರಂದು ಉಡುಪಿ ನಗರದ ರಿಲಯನ್ಸ್‌ ಮಾರ್ಟ್‌ ಎದುರು ಇರುವಾಗ ಸಾಯಿ ಹೋಟೇಲ್‌ ನಲ್ಲಿ ಕೆಲಸ ಮಾಡುವ ವಯಸ್ಸಾದ ಒಬ್ಬರು ನಡೆದುಕೊಂಡು ಹೋಗುತ್ತಿದ್ದು ಅಲ್ಲಿಗೆ ಒಂದು ಮೋಟಾರ್‌ ಸೈಕಲ್‌ ನಲ್ಲಿ ಇಬ್ಬರು ಬಂದು, ಅದರಲ್ಲಿ ಓರ್ವನು ವಯಸ್ಸಾದವರಿಗೆ ಜೋರಾಗಿ ಬೈದು ಮಾತನಾಡಿ, ಹೊಡೆಯಲು ಹೋದಾಗ ಸತೀಶ್ ರವರು ಮತ್ತು ಇತರ ಆಟೋ ಚಾಲಕರು ಹೊಡೆಯುವುದನ್ನು ತಡೆದು, ಅವರನ್ನು ಕಳುಹಿಸಿಕೊಟ್ಟಿರುತ್ತಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
  • ಅದಾದ 15 ನಿಮಿಷದ ನಂತರ ಸತೀಶರವರು ಆಟೋ ನಿಲ್ದಾಣದ ಬಳಿ ಇರುವಾಗ ಚಂದನ್‌, ಚರಣ್‌, ಪ್ರಶಾಂತ್‌, ಶಿಫಾನ್‌ ಎಂಬವರು ಹಾಗೂ ಇತರ 3-4 ಜನರು ರಿಕ್ಷಾ ಚಾಲಕರಿಗೆ ಹಲ್ಲೆ ಮಾಡಬೇಕೆಂಬ ಉದ್ದೇಶದಿಂದ ಅಕ್ರಮಕೂಟ ಸೇರಿ ಕೊಂಡು ಬಂದು, ಸತೀಶ್ ರವರನ್ನು ತಡೆದು ನಿಲ್ಲಿಸಿ, ಕೈಯಿಂದ ಎದೆಗೆ ಹೊಡೆದಿದ್ದು, ನಂತರ ಮಂದಾರ ಎಂಬವರಿಗೆ ಎದೆಗೆ ಹಾಗೂ ತುಟಿಗೆ ಕೈಯಿಂದ ಹೊಡೆದಿದ್ದು, ದಿನೇಶ್‌ ರವರಿಗೆ ಬ್ಲೇಡಿನಿಂದ ಗೀರಿ, ಕೈಯಿಂದ ಭುಜಕ್ಕೆ ಹೊಡೆದು, ಮಾಧವ ರವರಿಗೆ ಕೈಯನ್ನು ತಿರುವಿರುವುದಲ್ಲದೆ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿ ಪರಾರಿಯಾಗಿರುತ್ತಾರೆ ಎಂದು ರಿಕ್ಷಾ ಚಾಲಕ ಸತೀಶ್ ರವರು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ದೂರನ್ನು ನೀಡಿದ್ದಾರೆ.
  • ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ ಕಲಂ: 143, 147, 341, 323, 324, 504, 506 ಜೊತೆಗೆ 149  ಐಪಿಸಿಯಂತೆ ಪ್ರಕರಣ ದಾಖಲಾಗಿದೆ.
error: No Copying!