ಹೆಬ್ರಿ: ದಿನಾಂಕ:08-10-2023(ಹಾಯ್ ಉಡುಪಿ ನ್ಯೂಸ್) ಅನೈತಿಕ ಸಂಬಂಧದ ಆರೋಪ ಹೊರಿಸಿ ಯುವತಿ ಯೋರ್ವಳಿಗೆ ಸಾರ್ವಜನಿಕವಾಗಿ ಅವಮಾನಿಸಿ ಕೊಲೆ ಬೆದರಿಕೆ ಹಾಕಿರುವ ಬಗ್ಗೆ ಮಹಿಳೆಯೋರ್ವರ ಮೇಲೆ ನೊಂದ ಯುವತಿ ಹೆಬ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಬ್ರಹ್ಮಾವರ ತಾಲೂಕು 38 ನೇ ಕಳ್ತೂರು ಗ್ರಾಮದ ಸಂತೆಕಟ್ಟೆ ಬೆಳಾರ್ ದರ್ಖಾಸು ನಿವಾಸಿಯಾಗಿರುವ ಸರಸ್ವತಿ (27) ಎಂಬವರು ಪರಿಶಿಷ್ಟ ಪಂಗಡದ ಉಪ ಜಾತಿಯಾದ ಮರಾಠಿ ನಾಯ್ಕ ಜಾತಿಗೆ ಸೇರಿದವರಾಗಿರುತ್ತಾರೆ ಎಂದು ದೂರಿನಲ್ಲಿ ಹೇಳಿ ಕೊಂಡಿದ್ದಾರೆ.
ಶ್ವೇತಾ ಕಾಮತ್ ಎಂಬವರು ಪವನ್ ಕಾಮತ್ ಎಂಬವರ ಹೆಂಡತಿಯಾಗಿದ್ದು ಬ್ರಹ್ಮಾವರ ತಾಲೂಕು 38 ಕಳ್ತೂರು ಗ್ರಾಮದ ಸಂತೆಕಟ್ಟೆ ನಿವಾಸಿಯಾಗಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಪ್ರಸ್ತುತ ಸುಮಾರು 4 ತಿಂಗಳುಗಳಿಂದ ಅವರ ತಾಯಿ ಮನೆ ಮಂಗಳೂರಿನಲ್ಲಿ ಇದ್ದಾರೆ ಎಂದು ತಿಳಿಸಿದ್ದಾರೆ. ಸರಸ್ವತಿ ಅವರು ಸುಮಾರು 5 ವರ್ಷಗಳಿಂದ ಬ್ರಹ್ಮಾವರ ತಾಲೂಕು 38 ನೇ ಕಳ್ತೂರು ಗ್ರಾಮದ ಸಂತೆಕಟ್ಟೆ ಯಲ್ಲಿರುವ ಪವನ್ ಕಾಮತ್ ರವರ ಗ್ರಾಮ ಒನ್ ಸಂಸ್ಥೆಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ಮಾಡಿಕೊಂಡಿರುತ್ತಾರೆ ಎಂದಿದ್ದಾರೆ .
ಪವನ್ ಕಾಮತ್ ರವರ ಹೆಂಡತಿ ಶ್ವೇತಾರವರು ಸರಸ್ವತಿ ರವರಿಗೆ ಮತ್ತು ಪವನ್ ಕಾಮತ್ ರಿಗೆ ಸಂಬಂಧ ಇದೆ ಎಂದು ಪ್ರಚಾರ ಪಡಿಸಿ ಸಾರ್ವಜನಿಕ ಸ್ಥಳದಲ್ಲಿ ನೀನು ಯಾವುದೋ ಕೆಟ್ಟ ನಾಯ್ಕ ಜಾತಿಗೆ ಸೇರಿದವಳು ನನ್ನ ಗಂಡನನ್ನು ಹಣದ ಆಸೆಗಾಗಿ ಅವನೊಂದಿಗೆ ಸಂಬಂದ ಹೊಂದಿರುತ್ತೀಯಾ ನಿನ್ನನ್ನು ಕಡಿದು ಕೊಲೆ ಮಾಡುತ್ತೇನೆ ಎಂದು ಹೇಳಿರುವುದಾಗಿ ಸರಸ್ವತಿ ರವರು ಹೆಬ್ರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ U/S 323,504,506 IPC ಮತ್ತು ಕಲಂ: 3(1)(r) , 3(1)(s), 3(2)(v-a) SC/ST act 1989 ರಂತೆ ಪ್ರಕರಣ ದಾಖಲಾಗಿದೆ.