- ಉಡುಪಿ: ದಿನಾಂಕ:30-09-2023(ಹಾಯ್ ಉಡುಪಿ ನ್ಯೂಸ್) ಬನ್ನಂಜೆ ಗಾಂಧಿ ಭವನದಲ್ಲಿ ಇಟ್ಟಿರುವ ದಾಖಲೆಗಳನ್ನು ಯಾರೋ ಕಳ್ಳರು ಕಳ್ಳತನ ನಡೆಸಿರುವ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
- ಉಡುಪಿ ತಾಲೂಕು ಕಛೇರಿಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ನಟರಾಜ್ (35) ಎಂಬವರು ಕರ್ತವ್ಯ ನಿರ್ವಹಿಸಿಕೊಂಡಿದ್ದು, ಉಡುಪಿ ತಾಲೂಕು ಕಛೇರಿಯ ಅಧೀನಕ್ಕೆ ಒಳಪಟ್ಟಿದ್ದ ಬನ್ನಂಜೆಯಲ್ಲಿರುವ ಗಾಂಧಿ ಭವನದಲ್ಲಿ ದಾಖಲೆಗಳನ್ನು ಹಿಂದಿನಿಂದಲೂ ಶೇಖರಿಸಿಡುತ್ತಿದ್ದು, ದಿನಾಂಕ 15/08/2023 ರಿಂದ ದಿನಾಂಕ 26/09/2023 ರ ನಡುವೆ ಗಾಂಧಿ ಭವನದ ಒಳಗೆ Rack ಗಳಲ್ಲಿ ಜೋಡಿಸಿಟ್ಟಿದ್ದ ದಾಖಲೆಗಳನ್ನು ಯಾರೋ ಕಳ್ಳರು ಹಿಂಬದಿಯ ಬಾಗಿಲನ್ನು ಮುರಿದು ಒಳಪ್ರವೇಶಿಸಿ ಕಳವು ಮಾಡಿಕೊಂಡು ಹೋಗಿರುತ್ತಾರೆ ಎಂದು ಪೊಲೀಸರಿಗೆ ದೂರನ್ನು ನೀಡಿದ್ದಾರೆ.
- ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಕಲಂ: 454, 457, 380 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.