ಹೆಬ್ರಿ: ದಿನಾಂಕ:30-09-2023(ಹಾಯ್ ಉಡುಪಿ ನ್ಯೂಸ್) ವರಂಗ ಗ್ರಾಮದ ಮಾತಿಬೆಟ್ಟು ಹೊಳೆಯ ಪರಿಸರದಲ್ಲಿ ಮರಳು ಕಳ್ಳತನ ನಡೆಸುತ್ತಿದ್ದ ವ್ಯಕ್ತಿಯ ಮೇಲೆ ಹೆಬ್ರಿ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಮಹಾಂತೇಶ ಜಾಬಗೌಡ ಅವರು ಪ್ರಕರಣ ದಾಖಲಿಸಿದ್ದಾರೆ.
ಹೆಬ್ರಿ ಪೊಲೀಸ್ ಠಾಣೆ ಪೊಲೀಸ್ ಉಪ ನಿರೀಕ್ಷಕರಾದ ಮಹಾಂತೇಶ ಜಾಬಗೌಡ ಅವರಿಗೆ ಸಾರ್ವಜನಿಕರಿಂದ ಬಂದ ಖಚಿತ ಮಾಹಿತಿಯ ಮೇರೆಗೆ ದಿನಾಂಕ:30/09/2023 ರಂದು ಬೆಳಗ್ಗೆ ಸಮಯ 05:00 ಗಂಟೆಗೆ ಹೆಬ್ರಿ ತಾಲೂಕು ವರಂಗ ಗ್ರಾಮದ ಮಾತಿಬೆಟ್ಟು ಹೊಳೆಯ ಮಾತಿಬೆಟ್ಟು ಪೆರ್ಮಾನ್ ಸೇತುವೆ ಬಳಿ ನೋಡಿದಾಗ ;ಮಾತಿಬೆಟ್ಟು ಹೊಳೆಯ ಮಾತಿಬೆಟ್ಟು ಪೆರ್ಮಾನ್ ಸೇತುವೆಯ ಕೆಳಗೆ 2 ಕಡೆಗಳಲ್ಲಿ ಆರೋಪಿ ರತ್ನಾಕರ ಪೂಜಾರಿ ಎಂಬವರು ತಮ್ಮ ಜಾಗದಲ್ಲಿ ಸರಕಾರದಿಂದ ಯಾವುದೇ ಪರವಾನಿಗೆಯನ್ನು ಪಡೆಯದೆ ಅಕ್ರಮವಾಗಿ ಸರಕಾರದ ಸೊತ್ತನ್ನು ಲಾಭದ ಉದ್ದೇಶದಿಂದ ಕಳವು ಮಾಡಿ ಸುಮಾರು 1 ಯುನಿಟ್ ನಷ್ಟು ಮರಳನ್ನು ಸಂಗ್ರಹಿಸಿ ಇಟ್ಟಿರುತ್ತಾರೆ ಎನ್ನಲಾಗಿದೆ.
ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಕಲಂ 379 ಐಪಿಸಿ ಯಂತೆ ಪ್ರಕರಣ ದಾಖಲಾಗಿದೆ.