ಶಿರ್ವಾ: ದಿನಾಂಕ : 12/09/2023 (ಹಾಯ್ ಉಡುಪಿ ನ್ಯೂಸ್) ಕಾಪು ತಾಲೂಕು,ಕುರ್ಕಾಲು ಗ್ರಾಮದ ಬಗಡಿಗುತ್ತು ನಾಗಬನದ ಬಳಿ ಗಾಂಜಾ ಸೇವನೆ ಮಾಡುತ್ತಿದ್ದ ಯುವಕನನ್ನು ಶಿರ್ವ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಸಕ್ತಿವೇಲು ಇ.ಅವರು ಬಂಧಿಸಿದ್ದಾರೆ.
ಶಿರ್ವಾ ಪೊಲೀಸ್ ಠಾಣೆ ಪೊಲೀಸ್ ಉಪ ನಿರೀಕ್ಷಕರಾದ ಶಕ್ತಿವೇಲು.ಇ.ಅವರು ದಿನಾಂಕ:09-09-2023ರಂದು ರೌಂಡ್ಸ್ ಕರ್ತವ್ಯದಲ್ಲಿರುವಾಗ ಕಾಪು ತಾಲೂಕು ಕುರ್ಕಾಲು ಗ್ರಾಮದ ಬಗಡಿಗುತ್ತು ನಾಗಬನದ ಬಳಿ ಆಪಾದಿತ ಸುಧೀಶ್ (19) ಎಂಬಾತ ಮಾದಕ ವಸ್ತು ಗಾಂಜಾವನ್ನು ಸಿಗರೇಟ್‌ನಲ್ಲಿ ಸೇರಿಸಿ ಸೇದುತ್ತಿದ್ದವನನ್ನು ಬಂಧಿಸಿ ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು, ಆಪಾದಿತನು ಗಾಂಜಾ ಮಾದಕ ವಸ್ತು ಸೇವನೆ ಮಾಡಿದ ಬಗ್ಗೆ ವೈದ್ಯಕೀಯ ವರದಿ ಬಂದಿರುತ್ತದೆ ಎನ್ನಲಾಗಿದೆ.
ಈ ಬಗ್ಗೆ ಆತನ ಮೇಲೆ ಶಿರ್ವಾ ಪೊಲೀಸ್ ಠಾಣೆಯಲ್ಲಿ ಕಲಂ: 27(b) NDPS Act ರಂತೆ ಪ್ರಕರಣ ದಾಖಲಾಗಿದೆ.