ಧರ್ಮಸ್ಥಳದ ಸೌಜನ್ಯಾ ಪ್ರಕರಣದಲ್ಲಿ ಗಂಭೀರ ಕರ್ತವ್ಯಲೋಪವೆಸಗಿದ ಮತ್ತು ಸಾಕ್ಷ್ಯಗಳನ್ನು ನಾಶಪಡಿಸಿದ ಪೊಲೀಸ್ ಅಧಿಕಾರಿಗಳನ್ನು ಹಾಗೂ ಮರಣೋತ್ತರ ಪರೀಕ್ಷೆ ಮಾಡಿದ ಸರಕಾರಿ ವೈದ್ಯರುಗಳನ್ನು ಮೊತ್ತಮೊದಲು, ವಿಳಂಬ ಮಾಡದೆ ಕೆಲಸದಿಂದ ಅಮಾನತು ಮಾಡಬೇಕಾಗಿದೆ. ಅಮಾನತು ಮಾಡುವುದರ ಬೆನ್ನಿಗೆ ಇವರುಗಳ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸಿ ವಿಚಾರಣೆ ನಡೆಸಬೇಕಾಗಿದೆ.
ಸಿಬಿಐ ನ್ಯಾಯಾಲಯವೇ ಸೌಜನ್ಯಾ ಪ್ರಕರಣದ ತೀರ್ಪಿನಲ್ಲಿ ಅಧಿಕಾರಿಗಳ ಕರ್ತವ್ಯಲೋಪಗಳನ್ನು ದಾಖಲಿಸಿದೆ. ಮಾತ್ರವಲ್ಲ, ಇವರ ವಿರುದ್ಧ ವಿಚಾರಣೆ ನಡೆಸಬೇಕೆಂದು ಸ್ಪಷ್ಟವಾಗಿ ಸೂಚಿಸಿದೆ.
ವಿಷಯ ಇಷ್ಟು ಸ್ಪಷ್ಟ ಇರುವಾಗ, ನ್ಯಾಯಾಲಯ ತೀರ್ಪು ಪ್ರಕಟಿಸಿ ಈಗಾಗಲೇ ಎರಡು ತಿಂಗಳು ಕಳೆದಿದೆಯಾದರೂ ಸರಕಾರ ಇನ್ನೂ ಸಹ ಮೀನ ಮೇಷ ಎಣಿಸುತ್ತಿರುವುದೇಕೇ ?
ಪ್ರಶ್ನೆ ಕೇಳುವುದು ನಮ್ಮ ಹಕ್ಕು, ಉತ್ತರಿಸುವುದು ಸರಕಾರದ ಕರ್ತವ್ಯ ಮತ್ತು ಜವಾಬ್ದಾರಿ.
~ ಶ್ರೀರಾಮ ದಿವಾಣ, ಉಡುಪಿ.