- ಉಡುಪಿ: ದಿನಾಂಕ :11-09-2023(ಹಾಯ್ ಉಡುಪಿ ನ್ಯೂಸ್) olx ನಲ್ಲಿ ಸ್ವತ್ತು ಗಳನ್ನು ಮಾರಾಟ ಮಾಡಲು ಹೋಗಿ ಮಹಿಳೆಯೋರ್ವರು ಆನ್ಲೈನ್ ವಂಚಕರಿಂದ ಒಂದು ಲಕ್ಷ ಮೂವತ್ತು ಸಾವಿರ ರೂಪಾಯಿಗಳನ್ನು ಕಳೆದು ಕೊಂಡು ಮೋಸ ಹೋಗಿರುವುದಾಗಿ ಪೊಲೀಸರಿಗೆ ದೂರು ನೀಡಿದ್ದಾರೆ.
- ಉ಼ಷಾ ಕಿರಣ್ ಎಂಬವರು ದಿನಾಂಕ:27-08-2023ರಂದು OLX ನಲ್ಲಿ ತನ್ನಲ್ಲಿರುವ ಸ್ವತ್ತುಗಳ ಮಾರಾಟದ ಬಗ್ಗೆ ಮಾಹಿತಿ ಹಾಕಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಓರ್ವ ವ್ಯಕ್ತಿಯು ಉಷಾ ಕಿರಣ್ ರವರ ಸ್ವತ್ತುಗಳನ್ನು ಖರೀದಿಸುವುದಾಗಿ ತಿಳಿಸಿ ಅವರ ಮೊಬೈಲ್ ನಂಬರನ್ನು ಪಡೆದಿದ್ದು ಬಳಿಕ ಒಂದು ಮಹಿಳೆಯು ಮೊ. ನಂ : 8602485583 ದಿಂದ ಕರೆ ಮಾಡಿ ತಾನು ಸ್ವತ್ತುಗಳನ್ನು ಖರೀದಿಸುವುದಾಗಿ ತಿಳಿಸಿ ತನ್ನಲ್ಲಿ ನಗದು ಹಣ ಇಲ್ಲ. ಗೂಗಲ್ ಪೇ ಮಾಡಲು ಉಷಾ ಕಿರಣ್ ರವರ ಜಿ. ಪೇ ನಂಬರನ್ನು ಪಡೆದುಕೊಂಡಿದ್ದು, 2 ಗಂಟೆ ಬಿಟ್ಟು ಉಷಾಕಿರಣ ರವರ ಮೊಬೈಲ್‌ಗೆ ತುಂಬಾ QR ಕೋಡ್‌ಗಳು ಮೊ. ನಂ : 8602485583 ರಿಂದ ಬಂದಿರುತ್ತದೆ ಎಂದಿದ್ದಾರೆ. ಉಷಾಕಿರಣರವರು ಆ QR ಕೋಡ್‌ಗಳನ್ನು ತೆರೆದು ನೋಡಿದಾಗ ಉಷಾ ಕಿರಣ್ ರವರ ಗೂಗಲ್ ಪೇ ಆಪ್ ತೆರೆದುಕೊಂಡಿದ್ದು ಬಳಿಕ 27.08.2023 ರಂದು 10.20 ಗಂಟೆಯಿಂದ 28.08.2023 ರ ಮದ್ಯಾಹ್ನ 12.15 ರ ನಡುವಣ ಸಮಯ ಉಷಾಕಿರಣ ರವರ 3 ಬ್ಯಾಂಕ್ ಖಾತೆಗಳಿಂದ ಒಟ್ಟು ರೂ. 1,28,496/- ಹಣ ಬೇರೆ ಖಾತೆಗೆ ವರ್ಗಾವಣೆ ಆಗಿರುತ್ತದೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
- ಈ ಬಗ್ಗೆ ಉಡುಪಿ ಸೆನ್ ಪೊಲೀಸ್ ಠಾಣೆಯಲ್ಲಿ ಕಲಂ: 66(C) (D) IT Act ಮತ್ತು ಕಲಂ: 419, 420 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.