Spread the love

ಗಂಗೊಳ್ಲಿ: ದಿನಾಂಕ :04-09-2023(ಹಾಯ್ ಉಡುಪಿ ನ್ಯೂಸ್) ಹಕ್ಲಾಡಿ ಗ್ರಾಮದ ಗೇರು ಹಾಡಿಯಲ್ಲಿ ಇಸ್ಪೀಟ್ ಜುಗಾರಿ ಆಡುತ್ತಿದ್ದ ನಾಲ್ವರನ್ನು ಗಂಗೊಳ್ಳಿ ಪೊಲೀಸ್ ಠಾಣೆಯ ಪಿಎಸ್ಐ ಯವರಾದ ಬಸವರಾಜ್ ಕನಶೆಟ್ಟಿ ಯವರು ಬಂಧಿಸಿದ್ದಾರೆ.

 ಗಂಗೊಳ್ಳಿ ಪೊಲೀಸ್ ಠಾಣೆಯ ಪಿ.ಎಸ್‌ ಐ ಯವರಾದ (ತನಿಖೆ) ಬಸವರಾಜ್‌ ಕನಶೆಟ್ಟಿ ರವರು ದಿನಾಂಕ: 04-09-2023ರಂದು ಠಾಣೆಯಲ್ಲಿರುವಾಗ ಹಕ್ಲಾಡಿ ಗ್ರಾಮದ ಬೀಟ್‌ ಸಿಬ್ಬಂದಿ ನಾಗರಾಜ್‌ ರವರು  ಹಕ್ಲಾಡಿ ಗ್ರಾಮದ ಹಕ್ಲಾಡಿಯ ಸರ್ಕಾರಿ  ಗೇರು ಹಾಡಿಯಲ್ಲಿ ಇಸ್ಪೀಟು ಜುಗಾರಿ ನಡೆಯುತ್ತಿರುವ ಬಗ್ಗೆ ಮಾಹಿತಿ ನೀಡಿದ ಮೇರೆಗೆ ಠಾಣೆಯ ಸಿಬ್ಬಂದಿಯವರೊಂದಿಗೆ ಕೂಡಲೇ ಮಾಹಿತಿ ಬಂದ ಸ್ಥಳಕ್ಕೆ ಧಾಳಿ ನಡೆಸಿ ಇಸ್ಪೀಟ್ ಜುಗಾರಿ ಆಡುತ್ತಿದ್ದ ಆಪಾದಿತರಾದ 1. ಅಶ್ರಪ್‌ 2.  ಸುರೇಶ್‌3. ಗಣಪಯ್ಯ ಶೆಟ್ಟಿ, 4. ದಿನಕರ ಶೆಟ್ಟಿ ಎಂಬುವವರನ್ನು ಬಂಧಿಸಿ ವಶಕ್ಕೆ ಪಡೆದಿದ್ದು ಅವರು ಕೃತ್ಯಕ್ಕೆ ಬಳಸಿದ ನಗದು 6.100 /- ರೂ, ಇಸ್ಪೀಟ್‌ ಎಲೆಗಳು –52, ಹಸಿರು ಬಣ್ಣದ ಬೆಡ್‌ ಶೀಟ್‌ -1 ನ್ನು ಸ್ವಾಧೀನಪಡಿಸಿಕೊಂಡಿರುತ್ತಾರೆ.

ಈ ಬಗ್ಗೆ ಗಂಗೊಳ್ಳಿ ಪೊಲೀಸ್‌ ಠಾಣೆಯಲ್ಲಿ ಕಲಂ 87 ಕರ್ನಾಟಕ ಪೊಲೀಸ್ ಕಾಯ್ದೆಯಂತೆ ಪ್ರಕರಣ ದಾಖಲಾಗಿದೆ.

error: No Copying!