Spread the love
  • ಉಡುಪಿ: ದಿನಾಂಕ:05-09-2023(ಹಾಯ್ ಉಡುಪಿ ನ್ಯೂಸ್) ಸೊಸೆಯೋರ್ವರು ತನ್ನ ಅತ್ತೆಗೆ ನಂಬಿಕೆ ದ್ರೋಹವೆಸಗಿ,ವಂಚಿಸಿ ಬ್ಯಾಂಕ್ ಲಾಕರ್ ನಲ್ಲಿದ್ದ ಚಿನ್ನಾಭರಣ ಎಗರಿಸಿದ್ದಾಳೆಂದು ನೊಂದ ವ್ರಧ್ಧೆ ಅತ್ತೆ ಪೊಲೀಸರಿಗೆ ದೂರು ನೀಡಿದ್ದಾರೆ.
  • ಉಡುಪಿ,76 ಬಡಗಬೆಟ್ಟು ಗ್ರಾಮದ ,ಬೈಲೂರು, ಮಹಿಷಮರ್ದಿನಿ ದೇವಸ್ಥಾನದ ಬಳಿಯ ನಿವಾಸಿ ಶ್ರೀಮತಿ ಶಾರದಾ (72) ಎಂಬವರು ದಿನಾಂಕ 03/03/1999 ರಂದು ಎಸ್‌.ಬಿ.ಎಂ (ಈಗಿನ ಎಸ್‌.ಬಿ.ಐ) ಬ್ಯಾಂಕ್‌ ನೇತಾಜಿ ಕ್ರಾಸ್‌ ರಸ್ತೆ ಉಡುಪಿ ಯಲ್ಲಿ ತನ್ನ ಮಗ ಕೃಷ್ಣಮೂರ್ತಿ ಜೊತೆಗೆ ಜಂಟಿ ಹೆಸರಿನಲ್ಲಿ ಬ್ಯಾಂಕ್‌ ಲಾಕರ್‌ ತೆರೆದಿದ್ದರು ಎಂದಿದ್ದಾರೆ. ಕೃಷ್ಣಮೂರ್ತಿಯವರು ದಿನಾಂಕ 05/08/2022 ರಂದು ಮೃತರಾಗಿದ್ದು ಆನಂತರ ಮಣಿಪಾಲ,ಆದರ್ಶ ನಗರ,ದುರ್ಗಾ ಟವರ್ಸ್ ನ ನಿವಾಸಿಯಾಗಿರುವ ಸೊಸೆ ಶ್ರೀಮತಿ ಮಮತಾ ಶೆಟ್ಟಿ (40) ಎಂಬವರು ಶಾರದಾರವರ ಜೊತೆ ಬ್ಯಾಂಕಿಗೆ ಬಂದು ಲಾಕರ್‌ ನಲ್ಲಿದ್ದ ಕೆಲವು ಚಿನ್ನಾಭರಣಗಳನ್ನು ತೆಗೆದು ಆಕೆಯ ಹೆಸರಿನಲ್ಲಿ ಅಡವಿಟ್ಟು ರೂಪಾಯಿ 3 ಲಕ್ಷ ಹಣವನ್ನು ಶಾರದಾರವರಿಗೆ ನೀಡಿರುತ್ತಾರೆ ಎನ್ನಲಾಗಿದೆ.
  • ದಿನಾಂಕ 22/11/2022 ರಂದು ಕೃಷ್ಣಮೂರ್ತಿಯ ಮರಣ ದೃಢಪತ್ರಿಕೆ ಬ್ಯಾಂಕಿಗೆ ನೀಡಲು ಹಾಗೂ ಲಾಕರಿನಿಂದ 3 ಚಿನ್ನದ ಸರಗಳನ್ನು ಒಡವೆ ಸಾಲಕ್ಕೆ ಬಳಸುವ ಬಗ್ಗೆ ತೆಗೆಯಲು ಶಾರದಾರವರನ್ನು ಬ್ಯಾಂಕಿಗೆ ಕರೆದುಕೊಂಡು ಹೋಗಿದ್ದು, ಆಪಾದಿತೆ ಮಮತಾ ಶೆಟ್ಟಿ ಯು 3 ಚಿನ್ನದ ಸರಗಳನ್ನು ಪಡೆದುಕೊಂಡು ಹೋಗಿದ್ದು ಅದನ್ನು ವಾಪಾಸು ನೀಡಿರುವುದಿಲ್ಲ ಎಂದಿದ್ದಾರೆ .
  • 2 ಲಕ್ಷ ಹಣವನ್ನು ಮಾತ್ರ ನೀಡಿರುತ್ತಾಳೆ ಎಂದಿದ್ದಾರೆ. ಮಮತಾ ಶೆಟ್ಟಿಯು ಹಲವು ಸಂದರ್ಭಗಳಲ್ಲಿ ಶಾರದಾ ರವರ ನಕಲಿ ಸಹಿಗಳನ್ನು ಹಾಕಿದ್ದು, ಶಾರದಾರವರಿಗೆ ವಂಚನೆ ಮಾಡುವ ಹಾಗೂ ಅಕ್ರಮ ಲಾಭ ಗಳಿಸುವ ದುರುದ್ದೇಶದಿಂದ ಬ್ಯಾಂಕ್‌ ಲಾಕರ್‌ಗೆ ಆಕೆಯ ಹೆಸರನ್ನು ಅಕ್ರಮವಾಗಿ ಸೇರಿಸಿಕೊಂಡು ಶಾರದಾರವರಿಗೆ ನಂಬಿಕೆ ದ್ರೋಹವೆಸಗಿ ಮೋಸ ಮಾಡಿರುತ್ತಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
  • ಶಾರದಾರವರು ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ ಕಲಂ: 406, 420 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.

error: No Copying!