Spread the love

ಕ್ರಾಂತಿಕಾರಿ ಸಮಾಜ ಸುಧಾರಕರಾದ ಕೇರಳದ ಬ್ರಹ್ಮರ್ಷಿ ನಾರಾಯಣ ಗುರುಗಳು ತೀಯಾ (ಬಿಲ್ಲವ) ಸಮಾಜಕ್ಕೆ ಸೇರಿದವರು. ನಾರಾಯಣ ಗುರುಗಳ ಬದುಕು ಮತ್ತು ಸಾಧನೆಗಳನ್ನು ಸರಿಯಾಗಿ ತಿಳಿದುಕೊಂಡವರು, ಅವರ ನಿಜವಾದ ಆಶಯಗಳನ್ನು ಅರ್ಥಮಾಡಿಕೊಂಡವರು, ಅವರ ಬಗ್ಗೆ ಅಪಾರ ಗೌರವ, ಅಭಿಮಾನ ಇರುವವರು ಯಾರೇ ಆಗಿರಲಿ ಅವರು ಸಹ ಅವರ ಜೀವನ ಪಯಣದಲ್ಲಿ ಬಡವರ ಜೊತೆಗೆ ನಿಲ್ಲುತ್ತಾರೆ, ಅಸ್ಪೃಶ್ಯರು, ಶೋಷಿತರು, ಒಕ್ಕಲುದಾರರು, ಗೇಣಿದಾರರು, ರೈತರು, ಕೂಲಿ ಕಾರ್ಮಿಕರ ಪರವಾಗಿ ನಿಂತು ಅವರ ವಿಮೋಚನೆಗಾಗಿ ಹೋರಾಡುತ್ತಾರೆ. ಇವರ ಮೇಲಾಗುವ ಎಲ್ಲಾ ರೀತಿಯ ಅನ್ಯಾಯ, ದೌರ್ಜನ್ಯ, ದಬ್ಬಾಳಿಕೆಯ ವಿರುದ್ಧ ಸಂಘಟನಾತ್ಮಕವಾಗಿ ಕೆಲಸ ಮಾಡುತ್ತಾರೆ.

ಧರ್ಮಸ್ಥಳದ ದೇವಾನಂದ್ ಅವರು ಸಹ ತೀಯಾ (ಬಿಲ್ಲವ) ಸಮಾಜದವರು. ಗುರು ನಾರಾಯಣರನ್ನು ತಿಳಿದವರು, ಅರ್ಥಮಾಡಿಕೊಂಡವರು. ಹಾಗಾಗಿ ಅವರು ಶೋಷಿತರ ಪರ ಹೋರಾಟದಲ್ಲಿ ತನ್ನನ್ನು ಸಂಪೂರ್ಣವಾಗಿ ತೊಡಗಿಸಿಕೊಂಡರು. ತನ್ನ ಕನಸನ್ನು ಸಾಕಾರಗೊಳಿಸಲು ಅವರು ಕರ್ನಾಟಕ ಪ್ರಾಂತ ರೈತ ಸಂಘದಲ್ಲಿ ಸಕ್ರಿಯರಾದರು. ಧರ್ಮಸ್ಥಳ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಸಂಘದ ನಾಯಕರಾಗಿ ಬೆಳೆದುನಿಂತರು. ಸ್ವತಃ ಗೇಣಿದಾರರಾದ ದೇವಾನಂದರು, ಧರ್ಮಸ್ಥಳ ಸುತ್ತಮುತ್ತಲುನ ಗೇಣಿದಾರರ ಧ್ವನಿಯಾದರು, ಅಪಾರ ಜನಪ್ರೀತಿ ಪಡೆದುಕೊಂಡರು.

ಧರ್ಮಸ್ಥಳ ಗ್ರಾಮದಲ್ಲಿ ಪಾಳೆಗಾರಿಕೆ ನಡೆಸುತ್ತಿದ್ದ, ಸರಕಾರ, ಸಂವಿಧಾನ ಮತ್ತು ಕಾನೂನುಗಳನ್ನು ಮೀರಿ, ನಿರಂಕುಶಧಿಕಾರಿಯಂತೆ ವರ್ತಿಸುತ್ತಿದ್ದ ಹೆಗ್ಗಡೆ ಗ್ಯಾಂಗ್ ನ ಅತಿರೇಕಗಳ ವಿರುದ್ಧ ಧರ್ಮಸ್ಥಳದಲ್ಲೇ ಇದ್ದುಕೊಂಡು ನೇರಾನೇರ, ಮುಖಾಮುಖಿ ಎದೆಸೆಟೆದುನಿಂತ ಛಲದಂಕಮಲ್ಲ, ಧೀರ, ಸ್ವಾಭಿಮಾನಿ ಹೋರಾಟಗಾರನೇ ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷರಾಗಿದ್ದ ದೇವಾನಂದ್ ಅವರು.

ಅಂದಿನವರೆಗೂ ಧರ್ಮಸ್ಥಳ ಗ್ರಾಮ ಪಂಚಾಯತ್ ನಲ್ಲಿ ಚುನಾವಣೆಯೇ ನಡೆಯುತ್ತಿರಲಿಲ್ಲ. ಇಲ್ಲಿ ಪ್ರಜಾಪ್ರಭುತ್ವವನ್ನು ನೆಲೆನಿಲ್ಲಿಸಿದ ಕೀರ್ತಿ ದೇವಾನಂದ್ ಅವರಿಗೆ ಸಲ್ಲುತ್ತದೆ. ಇದಕ್ಕೆ ಅವರು ತೆತ್ತ ಬೆಲೆಯೇ, ಅವರ ಮಗಳು ಪದ್ಮಲತಾಳ ಬಲಿದಾನ…

(ಮುಂದುವರಿಯುವುದು)

~ ಶ್ರೀರಾಮ ದಿವಾಣ, ಉಡುಪಿ.

error: No Copying!