- ಶಂಕರನಾರಾಯಣ: ದಿನಾಂಕ 25-08-2023(ಹಾಯ್ ಉಡುಪಿ ನ್ಯೂಸ್) ಅಪರಾಧ ಪ್ರಕರಣವೊಂದರ ಆರೋಪಿಯು ಪೊಲೀಸ್ ತನಿಖೆಯ ವೇಳೆ ತನಿಖಾಧಿಕಾರಿಯವರಿಗೆ ಹಲ್ಲೆ ನಡೆಸಲು ಮುಂದಾದ ಘಟನೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ನಡೆದಿದೆ.
- ಶಂಕರನಾರಾಯಣ ಪೊಲೀಸ್ ಠಾಣೆ ಪೊಲೀಸ್ ಉಪ ನಿರೀಕ್ಷಕರಾದ (ತನಿಖೆ) ಮಧು ಬಿ.ಇ, ಅವರು ಶಂಕರನಾರಾಯಣ ಪೊಲೀಸ್ ಠಾಣಾ ಅಪರಾಧ ಕಲಂ: 406, 420, 417,109, 504, 506 ಜೊತೆಗೆ 149 ಐಪಿಸಿ ಪ್ರಕರಣದಲ್ಲಿ ತನಿಖೆಗೆ ಬಂದ ಆರೋಪಿ ಅಶೋಕ ಶೆಟ್ಟಿ(62), ವಾಸ: ಬನ್ನಾಡಿ ಕಂಬಳ ಗದ್ದೆ ಮನೆ ಬ್ರಹ್ಮಾವರ ಎಂಬವರಲ್ಲಿ ಪ್ರಕರಣದ ಬಗ್ಗೆ ವಿಚಾರಣೆ ಮಾಡುತ್ತಿರುವಾಗ ಆರೋಪಿ ಅಶೋಕ ಶೆಟ್ಟಿ ಯು ಪೊಲೀಸ್ ಅಧಿಕಾರಿಯವರಿಗೆ ಕೇಸು ವಿಚಾರಣೆ ಮಾಡಲು ನೀನು ಯಾರು? ನಿನಗೆ ಏನು ಅಧಿಕಾರ ಇದೆ, ನಾನು ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡು ಬಂದಿದ್ದು, ನನ್ನ ಕೇಳಲು ನಿನಗೆ ಅಧಿಕಾರ ಇಲ್ಲ ಎಂದು ಉಡಾಫೆ ಮಾತನಾಡಿರುತ್ತಾರೆ ಎಂದು ದೂರಿದ್ದಾರೆ.
- ಈ ಸಮಯ ಅವರಲ್ಲಿ ತನಿಖಾಧಿಕಾರಿ ಸಮಾಧಾನದಿಂದ ಮಾತನಾಡಿದರೂ ಸಹ ಕೇಳದೇ ಕೈಯಲ್ಲಿ ಇದ್ದ ಪ್ರಕರಣದ ಕಡತವನ್ನು ಎಳೆದುಕೊಂಡು ಅದನ್ನು ಬಿಸಾಡಿರುತ್ತಾರೆ ಎಂದು ದೂರಿದ್ದಾರೆ. ಈ ಸಮಯ ಆರೋಪಿಯು ಪ್ರಕರಣದ ಕಡತವನ್ನು ಹರಿದು ಹಾಕುತ್ತಾನೆ ಎಂದು ಮನಗಂಡು ಕಡತವನ್ನು ವಾಪಾಸು ಕೊಡುವಂತೆ ಹೇಳಿದಾಗ ತನಿಖಾಧಿಕಾರಿ ಮಧು ಬಿ.ಇ ಅವರ ಎದೆಗೆ ಕೈ ಹಾಕಿ ದೂಡಿ ಹಾಕಿ ಪ್ರಕರಣದ ತನಿಖಾಧಿಕಾರಿಯಾದ ಮಧು ಬಿ ಇ ಅವರು ಸಮವಸ್ತ್ರ ಧರಿಸಿ ಪ್ರಕರಣದ ತನಿಖೆ ಮಾಡುತ್ತಿರುವಾಗ ಆರೋಪಿ ಅಶೋಕ ಶೆಟ್ಟಿ ಸರಕಾರಿ ಕರ್ತವ್ಯ ನಿರ್ವಹಿಸಲು ಅಡ್ಡಿಪಡಿಸಿರುತ್ತಾನೆ ಎಂದು ದೂರು ದಾಖಲಾಗಿದೆ.
- ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಕಲಂ: 353 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.