- ಬ್ರಹ್ಮಾವರ: ದಿನಾಂಕ : 25-08-2023 (ಹಾಯ್ ಉಡುಪಿ ನ್ಯೂಸ್) ಹಾರಾಡಿ ಗ್ರಾಮದ ಕುಕ್ಕುಡೆ ಎಂಬಲ್ಲಿಯ ಸಾರ್ವಜನಿಕ ಸ್ಥಳದಲ್ಲಿ ಅಂದರ್ ಬಾಹರ್ ಜುಗಾರಿ ಆಡುತ್ತಿದ್ದ ನಾಲ್ವರನ್ನು ಬ್ರಹ್ಮಾವರ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ರಾಜಶೇಖರ ವಂದಲಿ ಅವರು ಬಂಧಿಸಿದ್ದಾರೆ.
- ಬ್ರಹ್ಮಾವರ ಪೊಲೀಸ್ ಠಾಣೆ ಪೊಲೀಸ್ ಉಪ ನಿರೀಕ್ಷಕರಾದ ರಾಜಶೇಖರ ವಂದಲಿ ಅವರಿಗೆ ದಿನಾಂಕ:24-08-2023ರಂದು ಬ್ರಹ್ಮಾವರ ತಾಲೂಕು ಹಾರಾಡಿ ಗ್ರಾಮದ ಕುಕ್ಕುಡೆ ಎಂಬಲ್ಲಿ ಸಾರ್ವಜನಿಕ ಹಾಡಿ ಜಾಗದಲ್ಲಿ ಅಂದರ್ ಬಾಹರ್ ಜುಗಾರಿ ಆಟ ಆಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ಬಂದ ಮಾಹಿತಿಯಂತೆ ಕೂಡಲೇ ದಾಳಿ ಮಾಡಿ ಅಲ್ಲಿ ಜುಗಾರಿ ಆಡುತ್ತಿದ್ದ ಆರೋಪಿಗಳಾದ 1) ಕೃಷ್ಣ ಪೂಜಾರಿ (58), ವಾಸ : ಗಾಂಧಿನಗರ, ಬೈಕಾಡಿ ಗ್ರಾಮ, ಬ್ರಹ್ಮಾವರ 2) ರಾಮಪ್ಪ (70), ವಾಸ : ಗಾಂಧಿನಗರ, ಬೈಕಾಡಿ ಗ್ರಾಮ, ಬ್ರಹ್ಮಾವರ 3) ಪ್ರಭಾಕರ ಶೆಟ್ಟಿಗಾರ್ (58), ವಾಸ : ಗಾಂಧಿನಗರ, ಬೈಕಾಡಿ ಗ್ರಾಮ, ಬ್ರಹ್ಮಾವರ 4) ಸೈಯದ್ ಅಯಾಜ್ (39), ವಾಸ : ಸೈಯದ್ ಮಂಜಿಲ್, ಗಾಂಧಿನಗರ, ಬೈಕಾಡಿ ಗ್ರಾಮ, ಬ್ರಹ್ಮಾವರ ಎಂಬವರನ್ನು ಬಂಧಿಸಿ ವಶಕ್ಕೆ ತೆಗೆದುಕೊಂಡು ಆರೋಪಿಗಳು ಇಸ್ಪಿಟ್ ಜುಗಾರಿ ಆಟವಾಡಿರುವ ಹಳೇಯ ಪೇಪರ್‌ನ ಮೇಲೆ ಹಾಕಿರುವ ಇಸ್ಪೀಟ್ ಆಟಕ್ಕೆ ಬಳಸಿದ ನಗದು ರೂಪಾಯಿ 2,100/- ಮತ್ತು ಇಸ್ಪೀಟ್ ಎಲೆಗಳು 52, ಹಾಗೂ ಅವುಗಳನ್ನು ಹಾಕಿದ್ದ ಹಳೆಯ ಪೇಪರನ್ನು ಸ್ವಾಧೀನಪಡಿಸಿಕೊಂಡಿರುತ್ತಾರೆ.
- ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ : ಕಲಂ 87 KP ACT ರಂತೆ ಪ್ರಕರಣ ದಾಖಲಾಗಿರುತ್ತದೆ.