Spread the love

ಕಾಪು : ದಿನಾಂಕ: 24-08-2023 (ಹಾಯ್ ಉಡುಪಿ ನ್ಯೂಸ್) ಉದ್ಯಾವರ ಬೋಳಾರ ಗುಡ್ಡೆಯ ಗ್ರೌಂಡ್ ಬಳಿ ಗಾಂಜಾ ಸೇವನೆ ಮಾಡಿದ್ದ ಯುವಕನನ್ನು ಕಾಪು ಪೊಲೀಸ್ ಠಾಣೆಯ ಪಿಎಸ್ಐ ಯವರಾದ ಪುರುಷೋತ್ತಮ ರವರು ಬಂಧಿಸಿದ್ದಾರೆ.

ಕಾಪು ಪೊಲೀಸ್ ಠಾಣೆ ಪಿಎಸ್ಐ (ತನಿಖೆ) ಯವರಾದ ಪುರುಷೋತ್ತಮರವರು ದಿನಾಂಕ: 24.08.2023 ರಂದು ಠಾಣಾ ಸಿಬ್ಬಂದಿಯಾದ ಹೆಚ್‌.ಸಿ ನಾರಾಯಣ ರವರೊಂದಿಗೆ ಇಲಾಖಾ ಜೀಪ್ ನಲ್ಲಿ ರೌಂಡ್ಸ್‌ ಕರ್ತವ್ಯದಲ್ಲಿರುವಾಗ ಠಾಣಾ ವ್ಯಾಪ್ತಿಯ ಉದ್ಯಾವರ ಗ್ರಾಮದ ಬೋಳಾರ್‌ ಗುಡ್ಡೆ ಸಿದ್ಧಿವಿನಾಯಕ ಗ್ರೌಂಡ್‌ ಬಳಿ ಅನುಮಾನಾಸ್ಪದವಾಗಿ ಓರ್ವ ವ್ಯಕ್ತಿ ಕಂಡು ಬಂದಿದ್ದು, ಆತನನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಆತ ಮಾದಕ ಸೇವನೆಯ ನಶೆಯಲ್ಲಿರುವ ಬಗ್ಗೆ ಅನುಮಾನಗೊಂಡು ಆತನನ್ನು ಬಂಧಿಸಿ ಸ್ಥಳದಲ್ಲಿಯೇ ವಶಕ್ಕೆ ಪಡೆದುಕೊಂಡು ಪೊಲೀಸರು ಆತನ ಹೆಸರು, ವಿಳಾಸ ವಿಚಾರಿಸಿದಾಗ ಆತನ ಹೆಸರು ಶ್ರೀಶ ವಿ (20) ವಾಸ: ಪ್ರೀತಿ ನಿಲಯ, ಬಂಕೇರಗಟ್ಟ ಬಲಾಯಿಪಾದೆ ಉಡುಪಿ ಎಂದು ತಿಳಿಸಿದ್ದು ಆತನನ್ನು ವೈದ್ಯಕೀಯ ಪರೀಕ್ಷೆಯ ಬಗ್ಗೆ ವೈಧ್ಯಾಧಿಕಾರಿಗಳು, ಸಮುದಾಯ ಆರೋಗ್ಯ ಕೇಂದ್ರ ಶಿರ್ವಾ ಇವರ ಮುಂದೆ ಹಾಜರುಪಡಿದ್ದು, ಪರೀಕ್ಷಿಸಿದ ವೈದ್ಯರು ಶ್ರೀಶ ವಿ ಎಂಬಾತನು ಗಾಂಜಾ ಸೇವಿಸಿರುವ ಬಗ್ಗೆ ದೃಢಪತ್ರ ನೀಡಿರುತ್ತಾರೆ ಎನ್ನಲಾಗಿದೆ.

ಆರೋಪಿಯ ಮೇಲೆ ಕಾಪು ಪೊಲೀಸ್ ಠಾಣೆಯಲ್ಲಿ ಕಲಂ: 27(ಬಿ) ಎನ್ ಡಿ ಪಿ ಎಸ್ ಕಾಯ್ದೆಯಂತೆ ಪ್ರಕರಣ ದಾಖಲಾಗಿದೆ.

error: No Copying!