Spread the love

ರೇಪ್ & ಮರ್ಡರ್ ಆದ ವೇದವಲ್ಲಿ ಟೀಚರ್ ಅವರ ಪ್ರಕರಣವನ್ನು ಬೆಳ್ತಂಗಡಿ ಠಾಣೆಯ ಪೊಲೀಸ್ ಅಧಿಕಾರಿಗಳು ಆತ್ಮಹತ್ಯೆ ಎಂದು ದಾಖಲಿಸಿಕೊಂಡು ಕೈತೊಳೆದುಕೊಂಡರು.

ಯುಡಿಆರ್ ನಂಬರ್ 08/1979, ಕಲಂ 174 ಸಿ ಆರ್ ಪಿ ಸಿಯಂತೆ ಪೊಲೀಸ್ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದರು. ವೇದವಲ್ಲಿ ಅವರಿಗೆ ಕ್ಯಾನ್ಸರ್ ಇತ್ತು, ಕರ್ತವ್ಯದಲ್ಲಿ ನಿರುತ್ಸಾಹವಿದ್ದುದರಿಂದ ಸಂಸ್ಥೆಯಿಂದ ವಜಾಗೊಂಡಿದ್ದರು. ಈ ಕಾರಣದಿಂದ ಅವರು ಮೈಮೇಲೆ ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕಡತ ತಯಾರಿಸಿದ ಪರಮಭ್ರಷ್ಟ ಪೊಲೀಸ್ ಅಧಿಕಾರಿಗಳು, ಈ ಪ್ರಕರಣವನ್ನೂ ಸಹ ಇಲ್ಲಿ ನಡೆದ ಇತರ ಕೊಲೆ ಪ್ರಕರಣಗಳಿಗೆ ಮಂಗಳ ಹಾಡುವ ರೀತಿಯಲ್ಲಿಯೇ ಮುಕ್ತಾಯಗೊಳಿಸಲು, ಮುಚ್ಚಿಹಾಕಲು ಯಶಸ್ವಿಯಾಗಿದ್ದಾರೆ.

ವೇದವಲ್ಲಿ ಟೀಚರ್ ಅವರ ಕೊಲೆ ಕೃತ್ಯದ ಪ್ರತ್ಯಕ್ಷದರ್ಶಿಯಾಗಿದ್ದ ಚೆಕ್ಕಿತ್ತಾಯರ ಮಗಳದ್ದೂ ಆತ್ಮಹತ್ಯೆಯಂತೆ. ಹೈಸ್ಕೂಲ್ ವಿದ್ಯಾರ್ಥಿನಿಯೊಬ್ಬಳು, 1979ರ ಕಾಲದಲ್ಲಿ ತನ್ನ 15 – 16ರ ಪ್ರಾಯದಲ್ಲಿ ಯಾಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ ? ಪೊಲೀಸ್ ಅಧಿಕಾರಿಗಳು ಬರೆದುದನ್ನೇ ಎಲ್ಲರೂ ನಂಬಬೇಕು !

ವೇದವಲ್ಲಿ ಅವರಿಗಾದ ಅನ್ಯಾಯದ ವಿರುದ್ಧ ಅಂದು ಅವರ ಪತಿ ಡಾ. ಬಿ. ಆರ್. ಹೆರಳೆ ಅವರು ಸತತವಾಗಿ ಪೊಲೀಸ್ ಅಧಿಕಾರಿಗಳನ್ನು ಪದೇ ಪದೇ ಭೇಟಿಯಾಗುತ್ತಾ, ಮನವಿ ಮಾಡುತ್ತಾ, ನ್ಯಾಯಕ್ಕಾಗಿ ಒತ್ತಾಯಿಸಿದ್ದಾರೆ. ಅನ್ಯಾಯದ ವಿರುದ್ಧ ಶಕ್ತಿಮೀರಿ ಹೋರಾಡಿದ್ದಾರೆ. ಆದರೆ ಆಗ ಅವರ ಜೊತೆಗೆ ಯಾರೂ ಇರಲಿಲ್ಲ. ಯಳಚಿತ್ತಾಯರು ಅವರ ಮಿತಿಯಲ್ಲಿ ಅನ್ಯಾಯದ ವಿರುದ್ಧ ಧ್ವನಿ ಎತ್ತಿದ್ದರು. ಆದರೆ ಯಾವುದೇ ಪ್ರಯೋಜನವಾಗಲಿಲ್ಲ.

(ಮುಂದುವರಿಯುವುದು)

~ ಶ್ರೀರಾಮ ದಿವಾಣ , ಉಡುಪಿ.

error: No Copying!