ಯಳಚಿತ್ತಾಯರ ಒಕ್ಕಲು, ಗೇಣಿದಾರರ ಪರ ಹೋರಾಟದ ತಂಡದಲ್ಲಿ ಕೊಯ್ಯೂರಿನವರೂ ಕೆಲವರಿದ್ದರು.
ಅದು 1970ರ ಕಾಲ. ಕೊಯ್ಯೂರಿನಲ್ಲಿ ಸಭೆ ನಡೆಯುತ್ತಿತ್ತು. ಪಾಳೆಗಾರರ, ಜಮೀನ್ದಾರರ ಸಹಿತ ಗೂಂಡಾಪಡೆ ಸಭೆಗೆ ದಾಳಿ ನಡೆಸಿತು.
ಸಭೆಯಲ್ಲಿದ್ದವರ ಕೈಗಳಲ್ಲಿ ಏನೂ ಇರಲಿಲ್ಲ. ಹಾಗಾಗಿ ಕೆಲವರು ಪೆಟ್ಟು ತಿಂದರು, ಗಾಯಗೊಂಡರು. ಒಂದಿಬ್ಬರು ಬಲಿಷ್ಟರಾಗಿದ್ದ ರೈತ ಕಾರ್ಮಿಕರು ಮಾತ್ರವೇ ಗೂಂಡಾಪಡೆಗೆ ಎದುರು ನಿಂತು ತಡೆದು ಹೋರಾಡಿದರು ಮತ್ತು ಗೂಂಡಾಗಳ ಗುರಿಯಾಗಿದ್ದ ಯಳಚಿತ್ತಾಯರನ್ನು ರಕ್ಷಿಸುವಲ್ಲಿ ಯಶಸ್ವಿಯಾದರು.
ಗೂಂಡಾಪಡೆಗೆ ಅಡ್ಡನಿಂತು ಪೆಟ್ಟು ತಿನ್ನುತ್ತಲೇ ಪ್ರತಿಯೇಟು ಕೊಡುತ್ತಲೇ ಯಳಚಿತ್ತಾಯರ (ಕೆ ವಿ ರಾವ್ ಉಜಿರೆ) ಬಳಗದ ಎಲ್ಲಾ ಪ್ರಮುಖರನ್ನು ರಕ್ಷಿಸಿದವರು ಧೀರರಾದ ಬಾಬು ಸಫಲ್ಯ ಎಂಬವರು. ಇವರು ಆಜಾನುಬಾಹುವಾಗಿದ್ದರು, ಬಲಿಷ್ಟರಾಗಿದ್ದರು. ಆದರೆ, ಇವರ ಮೇಲೆ ಅಂದು ಬಿದ್ದ ಗಂಭೀರ ಪೆಟ್ಟಿನ ಪರಿಣಾಮವಾಗಿ ಒಂದೆರಡು ವರ್ಷ ಹಿಂದೆ ಅವರ ನಿಧನದ ವರೆಗೂ ಅವರು ಎಲ್ಲೂ ಓಡಾಡಲಾಗದ ಸ್ಥಿತಿಯಲ್ಲೇ ಇದ್ದರು.
ಬಾಬು ಸಫಲ್ಯರನ್ನು ಕಂಡು ಮಾತಾಡಿಸಬೇಕು ಎಂದೆನಿಸಿ ಹೊರಟಾಗ ಅವರು ಇಹಲೋಕ ತ್ಯಜಿಸಿಯಾಗಿತ್ತು.
(ಮುಂದುವರಿಯುವುದು)
~ ಶ್ರೀರಾಮ ದಿವಾಣ, ಉಡುಪಿ.