ಕುಂದಾಪುರ: ದಿನಾಂಕ :22-08-2023 (ಹಾಯ್ ಉಡುಪಿ ನ್ಯೂಸ್) ತಲ್ಲೂರು ಗ್ರಾಮದ ಪ್ರವಾಸಿ ಹೋಟೆಲ್ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ಆಡುತ್ತಿದ್ದ ವ್ಯಕ್ತಿಯನ್ನು ಕುಂದಾಪುರ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಪ್ರಸಾದ್ ಕುಮಾರ್ ಅವರು ಬಂಧಿಸಿದ್ದಾರೆ.
ಕುಂದಾಪುರ ಪೊಲೀಸ್ ಠಾಣೆ ಪೊಲೀಸ್ ಉಪ ನಿರೀಕ್ಷಕ (ತನಿಖೆ)ರಾದ ಪ್ರಸಾದ್ ಕುಮಾರ್ ಅವರು ದಿನಾಂಕ:21-08-2023 ರಂದು ಹೆಮ್ಮಾಡಿ , ತಲ್ಲೂರು ಕಡೆಗಳಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವಾಗ ಕುಂದಾಪುರ ತಾಲೂಕು ತಲ್ಲೂರು ಗ್ರಾಮದ ಪ್ರವಾಸಿ ಹೋಟೆಲ್ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ಆಡುತ್ತಿರುವುದಾಗಿ ಬಂದ ಸಾರ್ವಜನಿಕ ಮಾಹಿತಿಯ ಮೇರೆಗೆ ಕೂಡಲೇ ಸ್ಥಳಕ್ಕೆ ದಾಳಿ ನಡೆಸಿ ಮಟ್ಕಾ ಜುಗಾರಿ ಆಟ ನಡೆಸುತ್ತಿದ್ದ ಭಾಸ್ಕರ ಪೂಜಾರಿ (55), ವಾಸ: ಶ್ರೀಕೃಷ್ಣನಿಲಯ ಆಲೂರುಕ್ರಾಸ್ ಚಿತ್ತೂರು ಗ್ರಾಮ ಕುಂದಾಪುರ ಎಂಬಾತನನ್ನು ಸಿಬ್ಬಂದಿಯವರ ಸಹಾಯದಿಂದ ಬಂಧಿಸಿ ಮಟ್ಕಾ ಜುಗಾರಿ ಆಟಕ್ಕೆ ಬಳಸಿದ ನಗದು ರೂಪಾಯಿ 3,600/- ರೂಪಾಯಿ ಹಾಗೂ ಮಟ್ಕಾ ಸಂಖ್ಯೆ ಬರೆದ ಚೀಟಿ-1, ಮಟ್ಕಾ ಬರೆಯಲು ಉಪಯೋಗಿಸಿದ ಬಾಲ್‌ಪೆನ್ನು-1 ನ್ನು ಸ್ವಾಧೀನಪಡಿಸಿಕೊಂಡಿರುತ್ತಾರೆ.
ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಕಲಂ: 78 (i) (iii) KP ACT ರಂತೆ ಪ್ರಕರಣ ದಾಖಲಾಗಿದೆ.