
ಉಜಿರೆಯ ರಸ್ತೆ ಬದಿಯಲ್ಲೇ ಇದ್ದ ಅಂಗಡಿ ಬೀಗ ತೆಗೆದ ಯಳಚಿತ್ತಾಯರು, ಚಪ್ಪಲಿ ಕಳಚಿಟ್ಟು ಒಂದು ಮರದ ಹಲಗೆಯನ್ನಷ್ಟೇ ಬದಿಗೆ ಸರಿಸಿ ಒಳಗೆ ಹೋಗಿದ್ದರು.
ಅಷ್ಟರಲ್ಲಿ ಜೀಪು ಮತ್ತು ಲಾರಿಯಲ್ಲಿ ಬಂದವರು, ತೆರೆದಿದ್ದ ಚಿಲಕವನ್ನು ಹಾಕಿ ಪೆಟ್ರೋಲ್ ಸುರಿದು ಬೆಂಕಿ ಕೊಟ್ಟರು.
ಅಂಗಡಿಯಿಂದ ಹೊರಗಡೆ ಆಚೆ ಬದಿಯಲ್ಲಿ ಆಳೆತ್ತರಕ್ಕೆ ಬೆಳೆದು ನಿಂತಿದ್ದ ಹುಲ್ಲು ಪೊದೆಗಳೆಡೆಯಿಂದ ಎದ್ದು ನಿಂತ ಯಳಚಿತ್ತಾಯರು ಒಂದು ಧೀರ್ಘ ನಿಟ್ಟುಸಿರು ಬಿಟ್ಟರು. ಆಗ ಅವರಿಗ್ಹೇಗೆ ಆಗಿರಬೇಡ.. ನಾವೇ ಅವರ ಸ್ಥಾನದಲ್ಲಿ ನಿಂತು ಒಮ್ಮೆ ಯೋಚಿಸಬೇಕಷ್ಟೆ.
ಅಂಗಡಿಯೊಳಗೆ ಹೋದ ಯಳಚಿತ್ತಾಯರು ಒಂದು ಚೆಂಬು ನೀರಿನೊಂದಿಗೆ ಹಿಂಬದಿಯಿಂದ ಹೊರಗೆ ಹೋಗಿ ನಿತ್ಯದಂತೆ ಹುಲ್ಲು ಪೊದೆಗಳ ಮರೆಯಲ್ಲಿ ಕುಳಿತಿದ್ದರು. ಕುಳಿತ ಕಾರಣಕ್ಕೇ ಬದುಕಿದರು.
“ಅಣ್ಣ ಕುಮಾರ” ಜೀಪಿನಲ್ಲಿ ಕುಳಿತೇ ಎಲ್ಲರನ್ನು ನಿಯಂತ್ರಿಸುತ್ತಿದ್ದ. ಪೊಲೀಸರು ಕುಮಾರನ ಸೂಚನೆಯಂತೆ ನ್ಯಾಯವನ್ನು ಕೊಂದರು.
(ಮುಂದುವರಿಯುವುದು)
~ ಶ್ರೀರಾಮ ದಿವಾಣ, ಉಡುಪಿ .