Spread the love

ಕಾರ್ಕಳ: ದಿನಾಂಕ : 20/08/2023 (ಹಾಯ್ ಉಡುಪಿ ನ್ಯೂಸ್) ಬೆಳ್ಮಣ್ ಗ್ರಾಮದ ನಿರ್ಚಾಲು ಪೆಟ್ರೋಲ್ ಬಂಕ್ ಬಳಿಯ ಹೆದ್ದಾರಿ ಬದಿಯಲ್ಲಿ ಗಾಂಜಾ ಸೇವನೆ ಮಾಡಿ ತೂರಾಡುತ್ತಿದ್ದ ಯುವಕನನ್ನು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ದಿಲೀಪ್ ಜಿ.ಆರ್ ರ ವರು ಬಂಧಿಸಿದ್ದಾರೆ.

  ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಪೊಲೀಸ್‌ ಉಪನಿರೀಕ್ಷಕರಾಧ  ದಿಲೀಪ್ ಜಿ.ಆರ್ ರವರು ದಿನಾಂಕ: 18-08-2023 ರಂದು ಸಿಬ್ಬಂದಿಯವರೊಂದಿಗೆ ರೌಂಡ್ಸ್ ನಲ್ಲಿರುವಾಗ ಕಾರ್ಕಳ ತಾಲೂಕು ಬೆಳ್ಮಣ್ ಗ್ರಾಮದ ನಿರ್ಚಾಲು ಪೆಟ್ರೋಲ್ ಬಂಕ್‌ನಿಂದ ಸ್ವಲ್ಪ ಮುಂದಕ್ಕೆ ತಲುಪುವಾಗ ಕಾರ್ಕಳ-ಪಡುಬಿದ್ರಿ ರಾಜ್ಯ ಹೆದ್ದಾರಿಯ ಬದಿಯ ಸಾರ್ವಜನಿಕ ಸ್ಥಳದಲ್ಲಿ ಮಹಮ್ಮದ್ ಅಫಾಮ್ ಎಂ (19) ಎಂಬಾತ ನಶೆಯಲ್ಲಿ ತೇಲಾಡುತ್ತಿದ್ದು ಆತನನ್ನು  ಬಂಧಿಸಿ ವಶಕ್ಕೆ ಪಡೆದು ಪರಿಶೀಲಿಸಿದಾಗ ಆತನ ಬಾಯಿಯಿಂದ ಘಾಟು ವಾಸನೆ ಬರುತ್ತಿದ್ದು, ಅಸಂಬದ್ದ ರೀತಿಯಲ್ಲಿ ವರ್ತಿಸುತ್ತಿದ್ದ ಎನ್ನಲಾಗಿದೆ.

ಆತ ಗಾಂಜಾ ಅಥವಾ ಮನೋದ್ರೇಕ ಅಮಲು ಪದಾರ್ಥ ಸೇವನೆ ಮಾಡಿರಬಹುದು ಎಂದು ಸಂಶಯ ಬಂದು ಕಾರ್ಕಳ ಸಾರ್ವಜನಿಕ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ಆತ ಮಾದಕ ವಸ್ತು ಸೇವನೆ  ಮಾಡಿರುವುದು ದೃಢಪಟ್ಟಿರುವುದಾಗಿ ವೈದ್ಯರು ದಿನಾಂಕ 19/08/2023 ರಂದು ದೃಢಪತ್ರ ನೀಡಿರುತ್ತಾರೆ ಎನ್ನಲಾಗಿದೆ.

  ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಕಲಂ: 27(b) ಎನ್‌.ಡಿ.ಪಿ.ಎಸ್‌. ಕಾಯಿದೆ ಯಂತೆ ಪ್ರಕರಣ ದಾಖಲಾಗಿದೆ.

error: No Copying!