
ರಸ್ತೆ ಬದಿ ಅತೀ ಚಿಕ್ಕದಾದ ಚಪ್ಪಲಿ ಅಂಗಡಿ ಇಟ್ಟುಕೊಂಡು ಕಡುಬಡತನದ ಬದುಕು ಸಾಗಿಸುತ್ತಿದ್ದ ಯಳಚಿತ್ತಾಯರು (ಕೆ ವಿ ರಾವ್ ಉಜಿರೆ) 1957ರಿಂದ 1980ರವರೆಗೂ ಧರ್ಮಸ್ಥಳ, ಉಜಿರೆ ಗ್ರಾಮಗಳ ಸಹಿತ ಬೆಳ್ತಂಗಡಿ ತಾಲೂಕಿನಾದ್ಯಂತ ಬಡ, ಶೋಷಿತ ಗೇಣಿದಾರರು, ಒಕ್ಕಲು ಕುಟುಂಬಗಳಿಗಾಗುತ್ತಿದ್ದ ಅನ್ಯಾಯ, ದೌರ್ಜನ್ಯಗಳ ವಿರುದ್ಧ ಸಮರ್ಥ ತಂಡವೊಂದನ್ನು ಕಟ್ಟಿಕೊಂಡು ಅವಿರತವಾಗಿ ಹೋರಾಟ ನಡೆಸಿದರು.
ಪಾಳೆಗಾರರು, ಜಮೀನ್ದಾರರಿಂದ ಅವರು ಎದುರಿಸಿದ ಜೀವ ಬೆದರಿಕೆಗಳು ನೂರಾರು. ಆಕ್ರಮಣಗಳು ಹತ್ತಾರು. ಆದರೆ ಯಾವುದಕ್ಕೂ ಅವರು ಜಗ್ಗಲಿಲ್ಲ, ಬಗ್ಗಲಿಲ್ಲ.
ಎರಡು ಬಾರಿ ಅವರ ಮೇಲೆ ನಡೆದ ದಾಳಿಗಳಲ್ಲಿ ಅವರು ಬದುಕಿದ್ದೇ ಒಂದು ಪವಾಡ. ಒಂದು ಬಾರಿ ಅವರ ಅಂಗಡಿಗೆ ಹೊರಗಿನಿಂದ ಚಿಲಕ ಹಾಕಿ ಬೆಂಕಿ ಹಚ್ಚಿದರು. ಇನ್ನೊಂದು ಬಾರಿ ಅವರಿದ್ದ ಸಭೆಗೆ ದಾಳಿ ನಡೆಸಿದರು. ಆಗ ಒಬ್ಬ ಹೋರಾಟಗಾರ ಎದುರು ನಿಂತು ಯಳಚಿತ್ತಾಯರ ಸಹಿತ ಉಳಿದೆಲ್ಲರನ್ನೂ ರಕ್ಷಿಸಿದ್ದು ಒಂದು ಅಸಾಧಾರಣ ವಿದ್ಯಾಮಾನವೇ ಆಗಿದೆ.
(ಮುಂದುವರಿಯುವುದು)
~ ಶ್ರೀರಾಮ ದಿವಾಣ, ಉಡುಪಿ.