Spread the love

ಕೋಟ: ದಿನಾಂಕ: 20-08-2023(ಹಾಯ್ ಉಡುಪಿ ನ್ಯೂಸ್) ಸಾಸ್ತಾನ ಮಧುರಾ ಬಾರ್ ಬಳಿಯ ಹಾಡಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ನಡೆಸುತ್ತಿದ್ದ ವ್ಯಕ್ತಿಯನ್ನು ಕೋಟ ಪೊಲೀಸ್‌ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಶಂಭುಲಿಂಗಯ್ಯ ಎಮ್. ಇ ಅವರು ಬಂಧಿಸಿದ್ದಾರೆ.

ಕೋಟ ಪೊಲೀಸ್‌ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಶಂಭುಲಿಂಗಯ್ಯ ಎಮ್ ಇ, ಅವರು ದಿನಾಂಕ 18-08-2023 ರಂದು ರೌಂಡ್ಸ್‌‌  ಕರ್ತವ್ಯದಲ್ಲಿದ್ದಾಗ ಪಾಂಡೆಶ್ವರ ಗ್ರಾಮದ ಸಾಸ್ತಾನ  ಮಧುರಾ  ಬಾರ್‌‌‌‌‌ನ ಹಿಂಭಾಗದ ಬಳಿಯ  ಹಾಡಿ  ಜಾಗದಲ್ಲಿ ಆರೋಪಿ ಭಾಸ್ಕರ (49),  ಅಣ್ಣಯ್ಯ ಭಾಗವತರ ಮನೆ,  ಸಾಸ್ತಾನ,  ಪಾಂಡೇಶ್ವರ ಗ್ರಾಮ,  ಬ್ರಹ್ಮಾವರ  ತಾಲೂಕು ಎಂಬಾತ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮಧ್ಯ ಮಾರಾಟ ಮಾಡುತ್ತಿರುವ ಬಗ್ಗೆ ಬಂದ ಸಾರ್ವಜನಿಕ ಮಾಹಿತಿ ಮೇರೆಗೆ ಕೂಡಲೇ  ದಾಳಿ ನಡೆಸಿದಾಗ ಆರೋಪಿ ಭಾಸ್ಕರ ಮದ್ಯ ಮಾರಾಟ ಮಾಡಲು ಯಾವುದೇ ಪರವಾನಿಗೆ ಇಲ್ಲದೆ ಸ್ವಂತ ಲಾಭಕ್ಕಾಗಿ ಮದ್ಯದ ಟೇಟ್ರಾ ಪ್ಯಾಕ್‌ ಮಾರಾಟ ಮಾಡುತ್ತಿರುವುದಾಗಿ ತಿಳಿಸಿದ್ದು, ಆರೋಪಿಯ ವಶದಿಂದ  ಮದ್ಯ ತುಂಬಿದ  ತಲಾ  90  ml ನ 45 ಟೆಟ್ರಾ  ಪ್ಯಾಕ್‌ಗಳು ಇದ್ದು, ‌ಆತನ ಶರ್ಟ್‌ ಕಿಸೆಯಲ್ಲಿದ್ದ 280/- ರೂಪಾಯಿಯನ್ನು ಸ್ವಾಧೀನಪಡಿಸಿಕೊಂಡಿರುತ್ತಾರೆ. ಸ್ವಾಧೀನಪಡಿಸಿಕೊಂಡ ಸ್ವತ್ತಿನ ಒಟ್ಟು ಮೌಲ್ಯ ರೂಪಾಯಿ 2530/- ಆಗಿರುತ್ತದೆ ಎನ್ನಲಾಗಿದೆ.

ಈ ಬಗ್ಗೆ ಕೋಟ ಪೊಲೀಸ್‌ ಠಾಣೆಯಲ್ಲಿ ಕಲಂ: 32, 34  KE ACT ರಂತೆ ಪ್ರಕರಣ ದಾಖಲಾಗಿದೆ.

error: No Copying!