
“ಕುಡುಮ”ವನ್ನು ಅಳಿಸಿ ಧರ್ಮಸ್ಥಳವೆಂದು ನಾಮಕರಣ ಮಾಡಿದ್ದು ಮೂಲನಿವಾಸಿಗಳ ಇತಿಹಾಸ ಮತ್ತು ಅವರ ಹಕ್ಕುಗಳನ್ನು ನಾಶಪಡಿಸುವ ಜಮೀನ್ದಾರರ ಹೀನ ಅಜೆಂಡಾದ ಭಾಗವಾಗಿದೆ. ಕುಡುಮವೆಂದರೆ ಬೇಸಾಯಗಾರರು ಎಂದರ್ಥ. ಇಲ್ಲಿನ ಮೂಲನಿವಾಸಿಗಳು ಬೇಸಾಯಗಾರರಾಗಿದ್ದರು. ಇವರಿಂದಾಗಿಯೇ ಇಲ್ಲಿಗೆ ಈ ಹೆಸರು ಪ್ರಾಪ್ತವಾಗಿದೆ. ರಾಜಪ್ರಭುತ್ವದ ಪಕ್ಷಪಾತ ಮತ್ತು ಜಮೀನ್ದಾರರ ವಂಚನೆಯಿಂದಾಗಿ ಬೇಸಾಯಗಾರರು ಗೇಣಿದಾರರಾದರು, ಒಕ್ಕಲುಗಳಾದರು. ಇವರ ಕಷ್ಟ, ನಷ್ಟ, ಶೋಷಣೆ, ದೌರ್ಜನ್ಯವನ್ನು ನೋಡಿ ನೋಡಿ ಕನಲಿದ ಮಹಾಮಾನವತಾವಾದಿಯೊಬ್ಬರು ನೊಂದವರನ್ನು ಒಂದುಗೂಡಿಸಲು, ಸ್ವಾಭಿಮಾನದ, ಗೌರವದ ಬದುಕು ಕಟ್ಟಿಕೊಡಲು ಪಣತೊಟ್ಟರು. ಪ್ರಾಣವನ್ನೇ ಪಣಕ್ಕಿಟ್ಟು ತಮ್ಮ ಇಡೀ ಬದುಕನ್ನೇ ಬೆಂದವರಿಗಾಗಿ ಸಮರ್ಪಿಸಿದರು. ಅವರೇ ಯಳಚಿತ್ತಾಯರೆಂದೇ ಕರೆಸಿಕೊಳ್ಳುತ್ತಿದ್ದ ನಿಜ ಹೋರಾಟಗಾರ, ಕಾದಂಬರಿಕಾರ ಕೆ. ವಿ. ರಾವ್ ಉಜಿರೆ.
(ಮುಂದುವರಿಯುವುದು)
~ ಶ್ರೀರಾಮ ದಿವಾಣ, ಉಡುಪಿ.