Spread the love
  • ಶಂಕರನಾರಾಯಣ: ದಿನಾಂಕ 16/08/2023 (ಹಾಯ್ ಉಡುಪಿ ನ್ಯೂಸ್) ಅಜ್ರಿಗ್ರಾಮದ ದೊಡ್ಮನೆ ಎಂಬಲ್ಲಿನ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಜುಗಾರಿ ಆಟ ಆಡುತ್ತಿದ್ದ 13 ಜನರನ್ನು ಶಂಕರನಾರಾಯಣ ಪೊಲೀಸ್‌ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ನಾಸಿರ್ ಹುಸೇನ್ ರವರು ಬಂಧಿಸಿದ್ದಾರೆ.
  • ಶಂಕರನಾರಾಯಣ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ನಾಸಿರ್ ಹುಸೇನ್ ರವರಿಗೆ ದಿನಾಂಕ:15-08-2023ರಂದು ಕುಂದಾಪುರ ತಾಲೂಕಿನ ಆಜ್ರಿ ಗ್ರಾಮದ ದೊಡ್ಮನೆ ಎಂಬಲ್ಲಿನ ಸರಕಾರಿ ಹಾಡಿಯ  ಬಳಿಯ  ಸಾರ್ವಜನಿಕ  ಸ್ಥಳದಲ್ಲಿ ಅಕ್ರಮವಾಗಿ  ಗುಂಪುಗೂಡಿಕೊಂಡು ಇಸ್ಪೀಟ್ ಎಲೆಗಳಿಂದ  ಹಣವನ್ನು ಪಣವಾಗಿರಿಸಿ ಅಂದರ್  ಬಾಹರ್ ಜುಗಾರಿ  ಆಟ ಅಡುತ್ತಿದ್ದಾರೆ ಎಂಬ ಮಾಹಿತಿ ಬಂದಿದ್ದು ಕೂಡಲೇ ಠಾಣೆಯ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ದಾಳಿ ನಡೆಸಿ ಇಸ್ಪೀಟ್ ಜುಗಾರಿ ಆಡುತ್ತಿದ್ದ ಆರೋಪಿಗಳಾದ 1) ಶ್ರೀನಿವಾಸ ಆಚಾರಿ (62), ವಾಸ:ಆಜ್ರಿಹರ  ಆಜ್ರಿ ಗ್ರಾಮ ಕುಂದಾಪುರ 2) ಕರಿಯ  ಶೆಟ್ಟಿ(55), ವಾಸ: ರಾಮನಕೊಡ್ಲು ಆಜ್ರಿ ಗ್ರಾಮ ಕುಂದಾಪುರ  3) ರಘರಾಮ ಶೆಟ್ಟಿ (67), ವಾಸ: ರಾಮನಕೊಡ್ಲು ಆಜ್ರಿಗ್ರಾಮ ಕುಂದಾಪುರ  4) ವಿನಯ ಕುಮಾರ್ (33), ವಾಸ: ಬೆಳು ವಣಾ  ಆಜ್ರಿ ಗ್ರಾಮ ಕುಂದಾಪುರ  5) ಶೇಖರ  ಶೆಟ್ಟಿ (66), ವಾಸ: ಕುಂಟೋಡಿ ಆಜ್ರಿ  ಗ್ರಾಮ ಕುಂದಾಪುರ  6) ಶಂಕರ ಶೆಟ್ಟಿ (48), ವಾಸ: ಹಕ್ಲು ಮನೆ ಕದ್ರಿಗುಡ್ಡೆ ಕೆಂಚ ನೂರು ಗ್ರಾಮ ಕುಂದಾಪುರ   7) ಬಸವ ಪೂಜಾರಿ (65) ವಾಸ: ಗಂಗನಾಡು ಜೆಡ್ಡು,   ಬೆಳ್ಳಾಲ್  ಗ್ರಾಮ ಕುಂದಾಪುರ 8) ಸತೀಶ ಶೆಟ್ಟಿ (32), ವಾಸ: ಚಿಕ್ಕನಗುಡ್ಡೆ  ಆಜ್ರಿಗ್ರಾಮ ಕುಂದಾಪುರ 9) ನಾಗ ಕೊಠಾರಿ (65) ವಾಸ:ಕೆವರ್ಜಿ ಯಡೂರು ಆಜ್ರಿ ಗ್ರಾಮ ಕುಂದಾಪುರ 10) ವಿಜೇಂದ್ರ ಭಂಡಾರಿ (39) ವಾಸ: ತಗ್ಗುಂಜೆ  ಆಜ್ರಿ ಗ್ರಾಮ ಕುಂದಾಪುರ 11) ನಾಗರಾಜ್ ಶೆಟ್ಟಿ (63) ವಾಸ: ಕುಂಟೋಣಿ ಆಜ್ರಿ ಗ್ರಾಮ ಕುಂದಾಪುರ 12 ) ಸುಧಾಕರ  ಶೆಟ್ಟಿ (55), ವಾಸ: ಯಡೂರು ಆಜ್ರಿ  ಗ್ರಾಮ ಕುಂದಾಪುರ  ತಾಲೂಕು , 13) ರಾಜೀವ  ಶೆಟ್ಟಿ (72), ವಾಸ: ವಾಸ್ಕೋಡ್ ಮನೆ ಹಾರ್ಮಣ್ಣು ಬೆಳ್ಳಾಲ್  ಗ್ರಾಮ ಕುಂದಾಪುರ  ಎಂಬವರನ್ನು ಬಂಧಿಸಿ ಇವರೆಲ್ಲರೂ ಜುಗಾರಿ  ಆಟದ  ಬಗ್ಗೆ  ಉಪಯೋಗ ಮಾಡಿದ  ನಗದು  ಹಣ   14,770/-, ನೆಲದ ಮೇಲೆ  ಹಾಸಿದ ಹಳೆಯ  ದಿನಪತ್ರಿಕೆ  ಹಾಗೂ  52 ಇಸ್ಪೀಟ್  ಎಲೆಗಳನ್ನು  ಸ್ವಾದೀನಪಡಿಸಿಕೊಂಡಿರುತ್ತಾರೆ.
  • ಈ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣೆಯಲ್ಲಿ ಕಲಂ:  87 ಕರ್ನಾಟಕ ಪೊಲೀಸ್  ಕಾಯ್ದೆಯಂತೆ ಪ್ರಕರಣ ದಾಖಲಾಗಿದೆ.
error: No Copying!