Spread the love
  • ಉಡುಪಿ: ದಿನಾಂಕ: 16-08-2023( ಹಾಯ್ ಉಡುಪಿ ನ್ಯೂಸ್) ವಾಟ್ಸಪ್ ನಲ್ಲಿ ಪರಿಚಯವಾದ ಅಪರಿಚಿತರು ಹಣವನ್ನು ದ್ವಿಗುಣಗೊಳಿಸಿ ಕೊಡುವುದಾಗಿ ನಂಬಿಸಿ ಒಂದು ಲಕ್ಷ ರೂಪಾಯಿಗೂ ಹೆಚ್ಚು ವಂಚಿಸಿದ್ದಾರೆ ಎಂದು ಯುವತಿಯೋರ್ವರು ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
  • ಉಡುಪಿಯ ನಿವಾಸಿ ಅಕ್ಷತಾ (26) ಎಂಬವರಿಗೆ ದಿನಾಂಕ 09/08/2023 ರಂದು ವಾಟ್ಸ್ ಆ್ಯಪ್‌ನಲ್ಲಿ 9122931451 ನೇ ನಂಬ್ರದಿಂದ ಹಣವನ್ನು ದ್ವಿಗುಣಗೊಳಿಸಿ ನೀಡುವ ಬಗ್ಗೆ ಸಂದೇಶ ಬಂದಿದ್ದು ಈ ಮೊಬೈಲ್‌ ನಂಬ್ರಕ್ಕೆ ಅಕ್ಷತಾರವರು ಸಂಪರ್ಕಿಸಿದಾಗ ಹಣ ದ್ವಿಗುಣ ಗೊಳಿಸಿ ನೀಡುವ ಬಗ್ಗೆ ತಿಳಿಸಿದ್ದು ಇದನ್ನು ನಂಬಿದ ಅಕ್ಷತಾರವರು ದಿನಾಂಕ 09/08/2023 ರಿಂದ ದಿನಾಂಕ 10/08/2023 ರ ತನಕ ಹಂತ ಹಂತವಾಗಿ ರೂಪಾಯಿ 1,01,000/- ಹಣವನ್ನು ಆರೋಪಿಗಳು ನೀಡಿದ ಪೋನ್‌ ಪೇ ಐಡಿ, ಹಾಗೂ ಅವರ ಖಾತೆಗೆ ವರ್ಗಾಯಿಸಿದ್ದು ಆದರೆ ಆರೋಪಿಗಳು ಹಣವನ್ನು ದ್ವಿಗುಣಗೊಳಿಸಿ ನೀಡದೇ ಅಕ್ಷತಾರವರು ವರ್ಗಾವಣೆ ಮಾಡಿರುವ ಹಣವನ್ನು ವಾಪಾಸು ನೀಡದೇ ಮೋಸ ಮಾಡಿರುತ್ತಾರೆ ಎಂದು ಪೊಲೀಸರಿಗೆ ದೂರನ್ನು ನೀಡಿದ್ದಾರೆ .
  • ಅವರು ನೀಡಿದ ದೂರಿನಂತೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಕಲಂ: 66(D) ಐ.ಟಿ. ಆಕ್ಟ್‌ ರಂತೆ ಪ್ರಕರಣ ದಾಖಲಾಗಿದೆ.
error: No Copying!