ಕೋಟ: ದಿನಾಂಕ:15-08-2023 (ಹಾಯ್ ಉಡುಪಿ ನ್ಯೂಸ್) ಅಚ್ಲಾಡಿ ಗ್ರಾಮದ ಗಾಣಿಗರ ಬೆಟ್ಟುವಿನ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಜುಗಾರಿ ಆಡುತ್ತಿದ್ದ ಮೂವರನ್ನು ಕೋಟ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಶಂಭುಲಿಂಗಯ್ಯ ಎಮ್ ಇ ಅವರು ಬಂಧಿಸಿದ್ದಾರೆ.
ಕೋಟ ಪೊಲೀಸ್ ಠಾಣೆ , ಪೊಲೀಸ್ ಉಪ ನಿರೀಕ್ಷಕರಾದ ಶಂಭುಲಿಂಗಯ್ಯ ಎಮ್.ಇ ಅವರಿಗೆ ದಿನಾಂಕ: 14.08.2023 ರಂದು ಬ್ರಹ್ಮಾವರ ತಾಲೂಕು ಅಚ್ಲಾಡಿ ಗ್ರಾಮದ ಗಾಣಿಗರ ಬೆಟ್ಟು ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟು ಜುಗಾರಿ ಆಡುತ್ತಿರುವ ಬಗ್ಗೆ ಮಾಹಿತಿದಾರರಿಂದ ದೊರೆತ ಖಚಿತ ವರ್ತಮಾನದಂತೆ ಕೂಡಲೇ ಇಲಾಖಾ ವಾಹನದಲ್ಲಿ ಸಿಬ್ಬಂದಿಯವರೊಂದಿಗೆ ಮಾಹಿತಿ ಬಂದ ಸ್ಥಳಕ್ಕೆ ತೆರಳಿ ಇಸ್ಪೀಟು ಜುಗಾರಿ ಆಡುತ್ತಿರುವುದನ್ನು ಖಚಿತಪಡಿಸಿಕೊಂಡು ಧಾಳಿ ನಡೆಸಿ ತಮ್ಮ ಸ್ವಂತ ಲಾಭಕ್ಕಾಗಿ ಇಸ್ಪಿಟು ಜುಗಾರಿ ಆಟ ಆಡುತ್ತಿದ್ದ 6 ಜನ ಆರೋಪಿಗಳಲ್ಲಿ 3 ಜನ ಆರೋಪಿಗಳು ದಾಳಿಯ ಸಮಯ ಒಡಿ ಹೋಗಿದ್ದು, ಉಳಿದಂತೆ 1. ಅಣ್ಣಪ್ಪ 2.ಕರುಣಾಕರ ಪೂಜಾರಿ ಮತ್ತು 3. ಕರಿಯ ಪೂಜಾರಿ ಇವರುಗಳನ್ನು ಬಂಧಿಸಿ ವಶಕ್ಕೆ ಪಡೆದು ಅವರ ಬಳಿ ಜುಗಾರಿ ಆಟಕ್ಕೆ ಬಳಸಿದ ರೂ. 9,440/- , 52 ಇಸ್ಪೀಟು ಎಲೆಗಳು, ಕೇಸರಿ ಬಣ್ಣದ ಪಂಚೆ ಮತ್ತು ಹಸಿರು ಬಣ್ಣದ Realme ಎಂಡ್ರಾಯ್ಡ್ ಮೊಬೈಲ್ ಒಂದನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಅಪರಾಧ ಕಲಂ: 87 KP ACT ನಂತೆ ಪ್ರಕರಣ ದಾಖಲಾಗಿದೆ.