Spread the love

ಕಾಪು: ದಿನಾಂಕ:03-08-2023(ಹಾಯ್ ಉಡುಪಿ ನ್ಯೂಸ್) ತನ್ನ ಗಂಡ ಮದುವೆಯಾದಾಗಿನಿಂದ ಮಾನಸಿಕವಾಗಿ, ದೈಹಿಕವಾಗಿ ಹಿಂಸೆ ನೀಡುತ್ತಿದ್ದು ಇದೀಗ ಬೇರೆ ವಿವಾಹವಾಗಲು ತನಗೆ ಕೊಲೆ ಬೆದರಿಕೆ ಹಾಕಿ ತಲಾಕ್ ನೀಡಿರುತ್ತಾರೆ ಎಂದು ಆರೋಪಿಸಿ ಮಹಿಳೆಯೋರ್ವರು ಪೋಲೀಸರಿಗೆ ದೂರು ನೀಡಿದ್ದಾರೆ.

ಆಸ್ಮಾ ಭಾನು(37)ಗಂಡ:ಮೊಹಮ್ಮದ್‌ ಸಾಧಿಕ್‌   ವಾಸ: ಕೋಟೆ ರಸ್ತೆ  ರೈಲ್ವೆ ನಿಲ್ದಾಣದ ಹತ್ತಿರ ಮಲ್ಲಾರು ಎಂಬವರಿಗೆ ಕಾಪು ತಾಲೂಕು ಮಲ್ಲಾರು ಗ್ರಾಮದ ಮೊಹಮ್ಮದ್‌ ಸಾಧೀಕ್‌ ಎಂಬವರೊಂದಿಗೆ ದಿನಾಂಕ:15-01-2006 ರಂದು ಮುಸ್ಲಿಂ ಶರಿಯತ್‌ ಪ್ರಕಾರ ವಿವಾಹವಾಗಿದ್ದು ವಿವಾಹದ ಬಳಿಕ ಆಸ್ಮಾಭಾನುರವರ ಪತಿ ಆಸ್ಮಾಭಾನುರವರೊಂದಿಗೆ ಸರಿಯಾಗಿ ಮಾತನಾಡದೇ ತಾಯಿಯ ಮನೆಗೆ ಹಾಗೂ ಮನೆಯ ಕಾಯ೯ಕ್ರಮಗಳಿಗೆ ಹೋಗಲು ಬಿಡದೇ  ಬೈಯುತ್ತಾ, ಹೊಡೆಯುತ್ತಾ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡುತ್ತಿದ್ದರು ಎಂದು ದೂರಿಕೊಂಡಿದ್ದಾರೆ.

ವಿವಾಹವಾದ ಆರು ತಿಂಗಳ ಬಳಿಕ ಆಸ್ಮಾಭಾನುರವರ ಪತಿ ಉದ್ಯೋಗದ ಬಗ್ಗೆ ವಿದೇಶಕ್ಕೆ ಹೋಗಿದ್ದು, ಅಲ್ಲಿಂದ ಆಸ್ಮಾಭಾನುರವರಿಗೆ ಮೊಬೈಲ್‌ ಕರೆ ಮಾಡಿ ಮಾನಸಿಕವಾಗಿ  ಹಿಂಸೆ ನೀಡುತ್ತಿದ್ದರು ಎಂದಿದ್ದಾರೆ. ಅಲ್ಲದೇ ಎರಡು ವಷ೯ದ ಬಳಿಕ ಉದ್ಯೋಗ ಕಳೆದುಕೊಂಡು ಊರಿಗೆ ಬಂದು ವ್ಯವಹಾರಕ್ಕೆಂದು ಆಸ್ಮಾಭಾನುರವರ 22 ಪವನ್‌ ಚಿನ್ನವನ್ನು ಬ್ಯಾಂಕಿನಲ್ಲಿಟ್ಟು ಹಣ ಪಡೆದುಕೊಂಡು, ನಂತರ ಚಿನ್ನವನ್ನು ಮರಳಿ ಕೇಳಿದಾಗ ನಿನಗೆ ತಲಾಕ್‌ ನೀಡುತ್ತೇನೆ, ನೀನು ಮನೆಬಿಟ್ಟು ಹೋಗದಿದ್ದರೇ ನಿನ್ನನ್ನು ಕೊಂದು ಬೇರೆ ವಿವಾಹವಾಗುತ್ತೇನೆಂದು  ಹೆದರಿಸುವುದಲ್ಲದೇ ಆಸ್ಮಾಭಾನುರವರಿಗೆ ಹಾಗೂ ಅವರ ಮಕ್ಕಳಿಗೆ ಒಂದಲ್ಲ ಒಂದು ಕಾರಣಕ್ಕೆ ಹೊಡೆಯುತ್ತಾ ಬೈಯುವುದನ್ನು ಮಾಡುತ್ತಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.

ನಿನ್ನೆ ದಿನ ದಿನಾಂಕ:02/08/2023 ರಂದು ರಾತ್ರಿ   ಮನೆಗೆ ಬಂದ ಆಸ್ಮಾಭಾನುರವರ ಪತಿ ಮೊಹಮ್ಮದ್ ಸಾದಿಕ್ ಆಸ್ಮಾಭಾನುರವರನ್ನುದ್ದೇಶಿಸಿ “ಅವಾಚ್ಯ ಶಬ್ದಗಳಿಂದ ಬೈದು  ನೀನು ಮನೆ ಬಿಟ್ಟು ಹೋಗು, ನೀನು ಮನೆಬಿಟ್ಟು ಹೋಗದಿದ್ದರೇ ನನಗೆ ಭೇರೆ ಮದುವೆಯಾಗಲು ಆಗುವುದಿಲ್ಲವೆಂದು ಹೇಳಿ “ತಲಾಕ್‌, ತಲಾಕ್‌, ತಲಾಕ್”‌ ಎಂದು ತ್ರಿವಳಿ ತಲಾಕ್‌ ನೀಡಿರುತ್ತಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಬಗ್ಗೆ ಕಾಪು ಪೊಲೀಸ್‌ಠಾಣೆಯಲ್ಲಿ  ಕಲಂ 498(A̧)504 506 323 ಐಪಿಸಿ ಮತ್ತು ಕಲಂ:4 ದಿ ಮುಸ್ಲಿಂ ವುಮೆನ್‌ (ಪ್ರೋಟೆಕ್ಷನ್‌ ಆಪ್‌ ರೈಟ್ಸ್‌ ಆನ್‌ ಮ್ಯಾರೇಜ್‌ ) ಆಕ್ಟ್-2019 ರಂತೆ ಪ್ರಕರಣ ದಾಖಲಾಗಿದೆ.

error: No Copying!