ಕಾರ್ಕಳ: ದಿನಾಂಕ: 03-08-2023(ಹಾಯ್ ಉಡುಪಿ ನ್ಯೂಸ್) ಮಿಯ್ಯಾರು ಗ್ರಾಮದ ಕಾರೋಲ್ಗುಡ್ಡೆ ಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ನಾಲ್ವರು ಯುವಕರನ್ನು ಕಾರ್ಕಳ ನಗರ ಪೊಲೀಸ್ ಠಾಣೆಯ ಪಿಎಸ್ಐ ಯವರಾದ ಸಂದೀಪ್ ಕುಮಾರ್ ಶೆಟ್ಟಿ ಯವರು ಬಂಧಿಸಿದ್ದಾರೆ
ಕಾರ್ಕಳ ನಗರ ಪೊಲೀಸ್ ಠಾಣೆಯ ಪಿಎಸ್ಐ ಯವರಾದ ಸಂದೀಪ್ ಕುಮಾರ್ ಶೆಟ್ಟಿ ಯವರು ದಿನಾಂಕ/31-07-2023 ರಂದು ಠಾಣೆಯಲ್ಲಿರುವಾಗ ಠಾಣಾ ವ್ಯಾಪ್ತಿಯ ಮಿಯ್ಯಾರು ಗ್ರಾಮದ ಕಾರೋಲ್ಗುಡ್ಡೆ 5 ಸೆಂಟ್ಸ್ ನಲ್ಲಿರುವ ಕಲ್ಲು ಕೆತ್ತುವ ಸ್ಥಳದ ಬಳಿ 4 – 5 ಜನ ವ್ಯಕ್ತಿಗಳು ಹಣ ಪಡೆದು ಅಮಲು ಪದಾರ್ಥವಾದ ಗಾಂಜಾವನ್ನು ಮಾರಾಟ ಮಾಡುತ್ತಿರುವುದಾಗಿ ಗುಪ್ತ ಮಾಹಿತಿ ಬಂದಿದ್ದು ಕೂಡಲೇ ಸಿಬ್ಬಂದಿಯವರೊಂದಿಗೆ ಸ್ಥಳಕ್ಕೆ ತಲುಪಿ ಧಾಳಿ ನಡೆಸಿ ಗಾಂಜಾ ಮಾರಾಟ ಮಾಡುತ್ತಿದ್ದ 1ನೇ ಅಪಾದಿತ ನರೇಂದ್ರ ಪ್ರಾಯ: 40 ವರ್ಷ ವಾಸ:ಜೋಡುಕಟ್ಟೆ, ಕರೋಲ್ಗುಡ್ಡೆ, ಮಿಯ್ಯಾರು ಗ್ರಾಮ ಕಾರ್ಕಳ ಅವನ ವಶದಲ್ಲಿದ್ದ ಸಣ್ಣ ಪ್ಲಾಸ್ಟಿಕ್ ಚೀಲದಲ್ಲಿ 182 ಗ್ರಾಂ ಮಾದಕ ವಸ್ತು ಗಾಂಜಾದ ಹಸಿ ಹೂವುಗಳು, ತೆನೆಗಳು, ಬೀಜ, ಎಲೆಗಳು, ಗಾಂಜಾ ಮಾರಾಟ ಮಾಡಿದ ನಗದು ಹಣ ರೂ 1,500/-, KA20EB6071ನೇ ನಂಬ್ರದ ಮೋಟಾರ್ ಸೈಕಲ್, ಅಪಾದಿತ 2) ಸಿರಾಜ್(21) ವಾಸ: ಮಸೀದಿ ಬಳಿ, ಪುಲ್ಕೇರಿ ಸಾಣೂರು ಗ್ರಾಮ ಕಾರ್ಕಳ , 3) ಅಬ್ದುಲ್ ಆರೀಪ್(26), ವಾಸ: ಮೇಲಿನಪಲ್ಕೆ ತೆಳ್ಳಾರು ಅಂಚೆ, ದುರ್ಗಾ ಗ್ರಾಮ ಕಾರ್ಕಳ ಮತ್ತು ಅಪಾದಿತ 4) ಜೀವನ(25), , ವಾಸ: ಅಂಗಡಿ ಮನೆ ಬಾಣಾಲು ಬೈಲೂರು ಅಂಚೆ, ಕೌಡೂರು ಗ್ರಾಮ ಕಾರ್ಕಳ ಇವರ ವಶದಿಂದ ಪ್ಲಾಸ್ಟಿಕ್ ಚೀಲ ಸಹಿತ ತಲಾ 12 ಗ್ರಾಮ್ ಮಾದಕ ವಸ್ತು ಗಾಂಜಾದ ಹಸಿ ಹೂವುಗಳು, ತೆನೆಗಳು, ಬೀಜ, ಎಲೆಗಳನ್ನು, ತಲಾ 100/ ರೂಗಳನ್ನು ಸ್ವಾಧೀನಪಡಿಸಿ ಅಪಾದಿತರನ್ನು ಬಂಧಿಸಿದ್ದಾರೆ.
ಸ್ವಾಧೀನಪಡಿಸಿಕೊಂಡ ಗಾಂಜಾದ ಮೌಲ್ಯ ರೂ 10,500/- ನಗದು ರೂ 1,800/- ಹಾಗೂ ರೂ 50,000/- ಮೌಲ್ಯದ ಮೋಟಾರ್ ಸೈಕಲನ್ನು ಸ್ವಾಧೀನಪಡಿಸಿಕೊಂಡಿರುತ್ತಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕಲಂ̇. 20(b)(II)(A) NDPS Actರಂತೆ ಪ್ರಕರಣ ದಾಖಲಾಗಿದೆ.