Spread the love
  • ಗಂಗೊಳ್ಳಿ: ದಿನಾಂಕ: 30.07.2023 (ಹಾಯ್ ಉಡುಪಿ ನ್ಯೂಸ್) ತ್ರಾಸಿ ಪ್ರವಾಸಿ ಮಂದಿರದ ಬಳಿ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಮಾಡಿ ತೂರಾಡುತ್ತಿದ್ದ ಮೂವರು ಯುವಕರನ್ನು ಗಂಗೊಳ್ಳಿ ಪೊಲೀಸ್ ಠಾಣೆಯ ಪಿಎಸ್ಐ ಯವರಾದ ಹರೀಶ್ ಆರ್ ರವರು ಬಂಧಿಸಿದ್ದಾರೆ.
  • ಗಂಗೊಳ್ಳಿ ಠಾಣಾ ಪಿಎಸ್ಐ ಹರೀಶ್ ಆರ್ ರವರು  ದಿನಾಂಕ:28-07-2023 ರಂದು ಠಾಣೆಯ ಸಿಬ್ಬಂದಿಯವರೊಂದಿಗೆ ರೌಂಡ್ಸ್ ನಲ್ಲಿರುವಾಗ ತ್ರಾಸಿ  ಗ್ರಾಮದ ತ್ರಾಸಿ ಪ್ರವಾಸಿ ಮಂದಿರದ  ಬಳಿ ಯಾರೋ ಗಾಂಜಾ ಸೇವಿಸುತ್ತಿರುವುದಾಗಿ ಸಾರ್ವಜನಿಕರಿಂದ ದೊರೆತ ಮಾಹಿತಿಯಂತೆ ಕೂಡಲೇ ಸಿಬ್ಬಂದಿಯವರೊಂದಿಗೆ ಮಾಹಿತಿ ಬಂದ ಸ್ಥಳಕ್ಕೆ ಹೋಗಿ  ಪರಿಶೀಲಿಸಿದಾಗ ಈರ್ವರು ವ್ಯಕ್ತಿಗಳು ತೊದಲುತ್ತಾ  ಮಾತನಾಡುತ್ತಿದ್ದು ಅವರು ಅಮಲು ಪದಾರ್ಥ ಸೇವಿಸಿ ಅಮಲಿನಲ್ಲಿ ಇರುವುದು ಕಂಡುಬಂದಿದ್ದು ಪೊಲೀಸರು ಅವರ ಹೆಸರು ವಿಳಾಸ ಕೇಳಿದಾಗ ಸಯ್ಯದ್ ಫಾರುಕ್, (ಪ್ರಾಯ: 30 ) ವಾಸ: ಸುಲ್ತಾನ್ ಮೊಹಲ್ಲಾ, ಗಂಗೊಳ್ಳಿ ಗ್ರಾಮ, ಕುಂದಾಪುರ ತಾಲೂಕು ಇನ್ನೋರ್ವ ಜಾಫರ್ ಸಿದ್ದಿಕ್ ( 32) ಭಾಷಾ ಮೊಹಲ್ಲಾ , ಗಂಗೊಳ್ಳಿ ಗ್ರಾಮ, ಕುಂದಾಪುರ ಎಂಬುದಾಗಿ ತಿಳಿಸಿದ್ದು ಹಾಗೂ ಗಂಗೊಳ್ಳಿ ಬಂದರು ಬಳಿ ಅಮಲಿನಲ್ಲಿದ್ದ ಇನ್ನೊಬ್ಬ ಮೊಹಮ್ಮದ್ ಫರಾನ್ (28) ದುರ್ಗಿ ಕೇರಿ ,ಗಂಗೊಳ್ಳಿ ಈ ಮೂವರೂ ಗಾಂಜಾದಂತಹ ಅಮಲು ಪದಾರ್ಥ ಸೇವನೆ ಮಾಡಿರುವ ಬಗ್ಗೆ ಅನುಮಾನ ಬಂದಿರುವುದರಿಂದ ಅವರನ್ನು ಬಂಧಿಸಿ ವಶಕ್ಕೆ ಪಡೆದು ಕುಂದಾಪುರ ಶ್ರೀ ಮಾತಾ ಆಸ್ಪತ್ರೆ ವೈಧ್ಯಾಧಿಕಾರಿಯವರ ಮುಂದೆ ಹಾಜರುಪಡಿಸಿ ವೈದ್ಯಕೀಯ ಪರೀಕ್ಷೆಗೊಳಪಡಿಸಿದಾಗ ಈ ಮೂವರೂ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿರುವುದಾಗಿ ವರದಿ ನೀಡಿರುತ್ತಾರೆ ಎನ್ನಲಾಗಿದೆ.
  •   ಈ ಬಗ್ಗೆ   ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಕಲಂ: 27(B) NDPS Act  ರಂತೆ ಪ್ರಕರಣ ದಾಖಲಾಗಿದೆ.
error: No Copying!