ಉಡುಪಿ: ದಿನಾಂಕ 30.07.2023 (ಹಾಯ್ ಉಡುಪಿ ನ್ಯೂಸ್) “ಜಿಗರ್ ಕೋಬ್ರಾ “ಎಂಬ ಹೆಸರಿನ ಇನ್ ಸ್ಟ್ರಾಗ್ರಾಮ್ ಖಾತೆದಾರನೊಬ್ಬ ಕಾಲೇಜು ವಿದ್ಯಾರ್ಥಿನಿಗೆ ಬೆದರಿಸಿ, ಅಶ್ಲೀಲ ಸಂದೇಶ ಕಳುಹಿಸಿ ,ಮಾನಸಿಕ ಕಿರುಕುಳ ನೀಡಿದ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಡುಪಿಯ ಕಾಲೇಜೊಂದರ ವಿದ್ಯಾರ್ಥಿನಿಯೋರ್ವಳಿಗೆ ಸಾಮಾಜಿಕ ಜಾಲತಾಣವಾದ ಇನ್ ಸ್ಟ್ರಾಗ್ರಾಮ್ ನಲ್ಲಿ Jigr_Cobra ಎಂಬ ಇನ್ ಸ್ಟ್ರಾಗ್ರಾಮ್ ಖಾತೆದಾರನೋರ್ವ ಮೊಬೈಲ್ ಮಾಧ್ಯಮದಲ್ಲಿ ಉಡುಪಿಯ ವಿಧ್ಯಾರ್ಥಿನಿಯೋರ್ವಳನ್ನು
ಇನ್ ಸ್ಟೃಗ್ರಾಮ್ ನಲ್ಲಿ ಹಿಂಬಾಲಿಸಿ, ಆಕೆಯನ್ನು ಭಯಪಡಿಸುವ ರೀತಿಯಲ್ಲಿ ಕೆಟ್ಟ ಹಾಗೂ ಅಶ್ಲೀಲ ಸಂದೇಶಗಳನ್ನು ಕಳುಹಿಸಿ, ವಿದ್ಯಾರ್ಥಿನಿಯ ಮಾನಸಿಕ ನೆಮ್ಮದಿಗೆ ಭಂಗ ಉಂಟು ಮಾಡಿರುತ್ತಾನೆ ಎಂದು ಪೊಲೀಸರಿಗೆ ವಿಧ್ಯಾರ್ಥಿನಿ ದೂರಿದ್ದಾಳೆ. ಈ ವಿದ್ಯಾಮಾನಗಳನ್ನು ನೊಂದ ವಿದ್ಯಾರ್ಥಿನಿ ಪರಿಚಯದವರಿಂದ ತಿಳಿದಿರುತ್ತಾಳೆ ಎಂದು ಪೊಲೀಸರಿಗೆ ದೂರಿದ್ದಾಳೆ.
ಈ ಬಗ್ಗೆ ನೊಂದ ವಿಧ್ಯಾರ್ಥಿನಿ ದೂರು ನೀಡಿದ್ದು,ಈ ಬಗ್ಗೆ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಕಲಂ: 67, ಐ.ಟಿ. ಆಕ್ಟ್. ಮತ್ತು 354(ಡಿ) ಐ.ಪಿ.ಸಿ.ಯಂತೆ ಪ್ರಕರಣ ದಾಖಲಾಗಿದೆ.