ಉಡುಪಿ: ದಿನಾಂಕ 29-07-2023(ಹಾಯ್ ಉಡುಪಿ ನ್ಯೂಸ್)
ಬನ್ನಂಜೆ ರಾಮಾಚಾರ್ಯರ ಪುತ್ರ ಸರ್ವಜ್ಞ (69) ರವರು ಇಂದು ಅಸೌಖ್ಯದಿಂದ ವಿಧಿವಶರಾಗಿದ್ದಾರೆ.
ಕರ್ನಾಟಕ ಬ್ಯಾಂಕ್ ಉದ್ಯೋಗಿಯಾಗಿ ಮೈಸೂರು, ಮಂಗಳೂರು ಹಾಗೂ ಉಡುಪಿ ಶಾಖೆಗಳಲ್ಲಿ ಸೇವೆ ಸಲ್ಲಿಸಿದ್ದರು. ಕಿನ್ನಿಮೂಲ್ಕಿ ವೇಗಸ್ ಲೇಔಟ್ ನಿವಾಸಿಯಾಗಿದ್ದ ಸರ್ವಜ್ಞ ರವರು ಸಾಮಾಜಿಕ ಕಾರ್ಯಕರ್ತರಾಗಿದ್ದು ಜನಾನುರಾಗಿಯಾಗಿದ್ದರು. ಅವರು ಪತ್ನಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.