- ಕಾರ್ಕಳ: ದಿನಾಂಕ 26/07/2023(ಹಾಯ್ ಉಡುಪಿ ನ್ಯೂಸ್) ಬಜಗೋಳಿ ಪೇಟೆಯಲ್ಲಿ ತಡ ರಾತ್ರಿ ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದ ಗಾಂಜಾ ಸೇವನೆ ಮಾಡಿದ್ದ ಮೂವರು ಯುವಕರನ್ನು ಗ್ರಾಮಾಂತರ ಠಾಣಾ ಪಿಎಸ್ಐ ಯವರಾದ ಸುಭಾಶ್ಚಂದ್ರ ಕಾಮತ್ ರವರು ಠಾಣಾ ಸಿಬ್ಬಂದಿಗಳೊಂದಿಗೆ ಬಂಧಿಸಿದ್ದಾರೆ
- ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯ ಪಿ.ಎಸ್.ಐ. ಯವರಾದ ಸುಭಾಶ್ಚಂದ್ರ ಕಾಮತ್ ರವರು ದಿನಾಂಕ 25-07-2023ರಂದು ಬೆಳಗಿನ ಜಾವ 3-30ಘಂಟೆಗೆ ಸಿಬ್ಬಂದಿಯವರೊಂದಿಗೆ ಖಾಸಗಿ ವಾಹನದಲ್ಲಿ ರಾತ್ರಿ ರೌಂಡ್ಸ್ ಕರ್ತವ್ಯದಲ್ಲಿರುವಾಗ ಕಾರ್ಕಳ ತಾಲೂಕು ಮುಡಾರು ಗ್ರಾಮದ ಬಜಗೊಳಿ ಪೇಟೆಯಲ್ಲಿನ ಚಿರಾಗ್ ಹೊಟೇಲು ಬಳಿ ಸಾರ್ವಜನಿಕ ಸ್ಥಳದಲ್ಲಿ ಮೂವರು ವ್ಯಕ್ತಿಗಳು ಅನುಮಾನಾಸ್ಪದ ರೀತಿಯಲ್ಲಿ ಯಾವುದೋ ದುಷ್ಕೃತ್ಯ ಮಾಡುವ ಉದ್ದೇಶದಿಂದ ಇದ್ದ ಬಗ್ಗೆ ಸಂಶಯಗೊಂಡು ಅವರುಗಳನ್ನು ಬಂಧಿಸಿ ವಶಕ್ಕೆ ಪಡೆದುಕೊಂಡು ಠಾಣೆಗೆ ಕರೆದುಕೊಂಡು ಬರುತ್ತಾರೆ.
- ಠಾಣೆಯಲ್ಲಿ ತಂದು ವಿಚಾರಣೆ ಮಾಡುತ್ತಿರುವಾಗ ಅವರುಗಳು ಯಾವುದೋ ಅಮಲು ಪದಾರ್ಥ ಸೇವಿಸಿರಬಹುದು ಎಂಬುದಾಗಿ ಸಂಶಯ ಬಂದಿದ್ದರಿಂದ ಅವರನ್ನು ಗಾಂಜಾ ಪರೀಕ್ಷೆ ಬಗ್ಗೆ ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ಮೂವರ ಪೈಕಿ ಅಬ್ದುಲ್ ಸಮದ್ ಹಾಗೂ ಅಬ್ದುಲ್ ರೆಹೆಮಾನ್ ರವರುಗಳು ಮಾದಕ ವಸ್ತು ಸೇವನೆ (Urine sample tested positive for Tetra hydro cannbinol) ಮಾಡಿರುವುದು ದೃಢಪಟ್ಟಿರುವುದಾಗಿ ಕಾರ್ಕಳ ಸರಕಾರಿ ಆಸ್ಪತ್ರೆಯ ವೈದ್ಯರು ದೃಢಪತ್ರ ನೀಡಿದ್ದಾರೆ ಎನ್ನಲಾಗಿದೆ.
- ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಲಂ 27(b) ಎನ್.ಡಿ.ಪಿ.ಎಸ್. ಕಾಯಿದೆ ಯಂತೆ ಪ್ರಕರಣ ದಾಖಲಾಗಿದೆ.