ಉಡುಪಿ: ದಿನಾಂಕ:27-07-2023(ಹಾಯ್ ಉಡುಪಿ ನ್ಯೂಸ್) ಜಿಲ್ಲೆಯಲ್ಲಿ ನಿರಂತರ ಮಳೆಯಾಗುತ್ತಿರುವ ಕಾರಣದಿಂದಾಗಿ ದಿನಾಂಕ:27-07-2023 ರಂದು ಕೂಡ ಶಾಲಾ, ಪದವಿ ಪೂರ್ವ ಕಾಲೇಜುಗಳಿಗೆ ಜಿಲ್ಲಾಧಿಕಾರಿಗಳು ರಜೆ ಘೋಷಿಸಿದ್ದಾರೆ.
ನಿರಂತರ ಮಳೆಯಾಗುತ್ತಿರುವ ಕಾರಣದಿಂದಾಗಿ ಜನಜೀವನ ಅಸ್ತವ್ಯಸ್ತ ವಾಗಿದ್ದು ಹೆಚ್ಚಿನ ಜನರು ಮನೆಯಿಂದ ಹೊರ ಬಾರದೆ ಇರುವ ಕಾರಣದಿಂದಾಗಿ ವ್ಯಾಪಾರ , ವ್ಯವಹಾರ ಕುಂಠಿತವಾಗಿದೆ ಎನ್ನಲಾಗುತ್ತಿದೆ .
ನಿರಂತರ ಮಳೆಯಿಂದ ಬೇಸತ್ತಿರುವ ಜನರು ಸೂರ್ಯನ ಕಿರಣಗಳಿಗಾಗಿ ಆಗಸವನ್ನು ದಿಟ್ಟಿಸುವಂತಾಗಿದೆ.