ಮಣಿಪಾಲ: ದಿನಾಂಕ : 26/07/2023 (ಹಾಯ್ ಉಡುಪಿ ನ್ಯೂಸ್) ಮಣಿಪಾಲದ ವಿದ್ಯಾರತ್ನ ನಗರ ಹಾಗೂ ಸರಳಬೆಟ್ಟಿನ ಎರಡು ಪ್ಲಾಟ್ ಗಳಿಗೆ ಮಣಿಪಾಲ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ದೇವರಾಜ್ ಟಿ ವಿ ಅವರು ಠಾಣಾ ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿ ಮೂವರು ಗಾಂಜಾ ಮಾರಾಟಗಾರರನ್ನು ಬಂಧಿಸಿದ್ದಾರೆ.
ಮಣಿಪಾಲ ಪೊಲೀಸ್ ಠಾಣೆ ಪೊಲೀಸ್ ನಿರೀಕ್ಷಕರಾದ ದೇವರಾಜ್ ಟಿ ವಿ ಅವರಿಗೆ ದಿನಾಂಕ:25-07-2023ರಂದು ಬಂದ ಖಚಿತ ವರ್ತಮಾನದಂತೆ ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ವಿದ್ಯಾರತ್ನ ನಗರದ, ವಿದ್ಯಾರತ್ನ Enclave ಅಪಾರ್ಟ್ ಮೆಂಟ್ ನ ರೂಮ್ ನಂ: 205 ಗೆ ಸಿಬ್ಬಂದಿಯವರೊಂದಿಗೆ ದಾಳಿ ನಡೆಸಿ ಆರೋಪಿ ಮಯಾಸ್ ಚಂದೆಲ್(18), ವಾಸ: : ಅದಿಲ್ ನಗರ , ಲಕ್ನೋ ಜಿಲ್ಲೆ. ಉತ್ತರ ಪ್ರದೇಶ , ವಿನಯ್ ಕುಮಾರ್ ಸಿಂಘ್ (20), ವಾಸ: ಶಕ್ತಿ ಸಾಯಿ ನಗರ ಕಾಲೋನಿ ಮಲ್ಲಾಪುರ ಗ್ರಾಮ ಹೈದರಾಬಾದ್ , ಆಂದ್ರಪ್ರದೇಶ ರಾಜ್ಯ ಎಂಬಿಬ್ಬರನ್ನು ಬಂಧಿಸಿ ವಶಕ್ಕೆ ಪಡೆದು ಅವರ ರೂಮ್‌ನಲ್ಲಿದ್ದ 25 ಗ್ರಾಂ ತೂಕದ 69 ಪಾಕೇಟ್‌ಗಳಷ್ಟು ಗಾಂಜಾ ಅದರ ಮೌಲ್ಯ 90,000/- , ಅಲ್ಲದೇ ಆಪಾದಿತ ಮಯಾಸ್ ಚಂದೆಲ್ ವಶದಲ್ಲಿದ್ದ Samsung ಕಂಪನಿಯ ಮೊಬೈಲ್ ಪೋನ್ ಹಾಗೂ ಆಪಾದಿತ ವಿನಯ್ ಕುಮಾರ್ ಸಿಂಘ್ ನ ವಶದಲ್ಲಿದ್ದ IPhone ಕಂಪನಿಯ ಮೊಬೈಲ್ ಪೋನ್ ಅನ್ನು ಸ್ವಾಧೀನಪಡಿಸಿಕೊಂಡಿರುತ್ತಾರೆ.
ಮಯಾಸ್ ಚಂದೆಲ್ ಹಾಗೂ ವಿನಯ್ ಕುಮಾರ್ ಸಿಂಘ್ ನೀಡಿದ, ಮಾಹಿತಿ ಮೇರೆಗೆ ಆಪಾದಿತ ಆಯುಶ್ ರಾಜ್ (21), ವಾಸ: ಬಿ. ಎನ್. ಪಿಡಿ ಸಿಂಘ್ ವಿ.ಇ.ಟಿ. ,ಎಲ್ ಬಿ ಎಸ್ ನಗರ, ಪಾಟ್ನಾ, ಬಿಹಾರ್ ರಾಜ್ಯ ಎಂಬಾತನು ವಾಸವಿದ್ದ ಹೆರ್ಗಾ ಗ್ರಾಮದ ಸರಳಬೆಟ್ಟು ಐಡಿಯಲ್ ರೆಸಿಡೆನ್ಸಿ C201 ರೂಮ್ ನಲ್ಲಿ ದಾಳಿ ನಡೆಸಿ ಆಪಾದಿತ ಆಯುಶ್ ರಾಜ್ ನ ವಶದಲ್ಲಿದ್ದ 25 ಗ್ರಾಂ ತೂಕದ 15 ಗಾಂಜಾ ಪಾಕೇಟ್‌ಗಳನ್ನು ಮೌಲ್ಯ 20,000/- , ಆತನ ಬಳಿಯಲ್ಲಿದ್ದ Apple ಕಂಪನಿಯ ಮೊಬೈಲ್ ಪೋನನ್ನು ವಶಪಡಿಸಿಕೊಂಡಿರುತ್ತಾರೆ.
ಪ್ರಕರಣದಲ್ಲಿ ಪ್ರಮುಖ ಆರೋಪಿಗಳಾದ ಶ್ರೀಕಾಂತ ಮಲ್ಲಿಕ್, ಆಯೂಶ್ ಸಿಂಗ್ ಮತ್ತು ನಿಯಾಸ್ ಶೇಖ್ ತಲೆಮರೆಸಿಕೊಂಡಿರುತ್ತಾರೆ.
ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಕಲಂ: 8(c) 20(b)(ii)(B) NDPS Act ರಂತೆ ಪ್ರಕರಣ ದಾಖಲಾಗಿದೆ.