ಮಲ್ಪೆ: ದಿನಾಂಕ:26-07-2023(ಹಾಯ್ ಉಡುಪಿ ನ್ಯೂಸ್) ಭಾರತ್ ಫೈನಾನ್ಸ್ ಇನ್ ಕ್ಲೂಷನ್ ಲಿಮಿಟೆಡ್ ಇದರ ಲೋನ್ ಆಫೀಸರ್ ಬಡ ಮಹಿಳೆಯರು ಸಾಲ ಕಟ್ಟಲು ನೀಡಿದ ಹಣವನ್ನು ಬ್ಯಾಂಕಿಗೆ ಭರಿಸದೆ ಲಕ್ಷಾಂತರ ರೂಪಾಯಿ ವಂಚನೆ ನಡೆಸಿರುವ ಬಗ್ಗೆ ದೂರು ದಾಖಲಾಗಿದೆ.
ಭಾರತ್ ಫೈನಾನ್ಸ್ ಇನ್ ಕ್ಲ್ಸೂಷನ್ ಲಿಮಿಟೆಡ್ ಉಡುಪಿ ಶಾಖೆ ಯ ಕಿದಿಯೂರು ಬ್ರಾಂಚ್ ಶಾಖೆಯಲ್ಲಿ ಲೋನ್ ಆಫೀಸರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಆಪಾದಿತ ದಿಲೀಪ್ ಎಸ್ ಎಸ್ ಎಂಬವನು ಬಡ ಮಹಿಳೆಯರು ಸಂಘದಿಂದ ಸಾಲವಾಗಿ ಪಡೆದುಕೊಂಡ ಹಣಕ್ಕೆ ಇನ್ನು ಹೆಚ್ಚಿನ ಸಾಲ ಕೊಡಿಸುವುದಾಗಿ ನಂಬಿಸಿ ಅದಕ್ಕೆ ಮುಂಗಡವಾಗಿ ಸಾಲ ಮರುಪಾವತಿಸಲು ತಿಳಿಸಿ ದಿನಾಂಕ 27/11/2021 ರಿಂದ 23/06/2023 ರವರೆಗೆ ಸಂಘದ ಸದಸ್ಯರಿಂದ ಆಪಾದಿತ ದಿಲೀಪ್ ಎಸ್.ಎಸ್ ಹಣವನ್ನು ವಸೂಲಾತಿ ಮಾಡಿ ಅದನ್ನು ಬ್ಯಾಂಕಿಗೆ ಕಟ್ಟದೆ ಹಣವನ್ನು ತನ್ನ ಸ್ವಂತ ಲಾಭಕ್ಕೆ ಬಳಸಿಕೊಂಡು ರೂಪಾಯಿ 11,88,878/- ಹಣವನ್ನು ದುರುಪಯೋಗ ಮಾಡಿ ವಂಚಿಸಿರುವುದಾಗಿ ಭಾರತ್ ಫೈನಾನ್ಸ್ ಇನ್ ಕ್ಲೂಷನ್ ಲಿಮಿಟೆಡ್ ಕಿದಿಯೂರು ಶಾಖೆಯ ಬ್ರಾಂಚ್ ಮೆನೇಜರ್ ಸುಂದರ್ ಶೆಟ್ಟಿ ಎಂಬವರು ನೀಡಿದ ದೂರಿನಂತೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.