Spread the love
  • ಹೆಬ್ರಿ: ದಿನಾಂಕ 23/06/2023 (ಹಾಯ್ ಉಡುಪಿ ನ್ಯೂಸ್) ಸೋಮೇಶ್ವರ ಬಸ್ ನಿಲ್ದಾಣದ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಚೀಟಿ ಬರೆಯುತ್ತಿದ್ದ ವ್ಯಕ್ತಿ ಯೋರ್ವನನ್ನು . ಹೆಬ್ರಿ ಪೊಲೀಸ್‌ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ನಿರಂಜನ ಕೆ ಹೆಗಡೆ ಅವರು ಬಂಧಿಸಿದ್ದಾರೆ.
  • ಹೆಬ್ರಿ ಪೊಲೀಸ್ ಠಾಣೆ ಪೊಲೀಸ್ ಉಪ ನಿರೀಕ್ಷಕರಾದ ನಿರಂಜನ ಕೆ ಹೆಗಡೆ ಅವರಿಗೆ ದಿನಾಂಕ 21-06-2023 ರಂದು ನಾಡ್ಪಾಲು  ಗ್ರಾಮದ ಸೋಮೇಶ್ವರ ಬಸ್‌ನಿಲ್ದಾಣದ ಸಾರ್ವಜನಿಕ ಶೌಚಾಲಯದ ಬಳಿ ಇರುವ ಸಾರ್ವಜನಿಕ ಸ್ಥಳದಲ್ಲಿ ಓರ್ವ ವ್ಯಕ್ತಿಯು ಮಟ್ಕಾ ಜುಗಾರಿ ಆಟ ಆಡುತ್ತಿರುವುದಾಗಿ ‌ಸಾರ್ವಜನಿಕರಿಂದ ಬಂದ  ಮಾಹಿತಿಯಂತೆ  ಕೂಡಲೇ ದಾಳಿ ಮಾಡಿ ಆರೋಪಿ ಪ್ರಕಾಶ್ (42), ವಾಸ; ಮುಂಡೋಳಿ ಹೌಸ್, ಬೇಳಿಂಜೆ ಅಂಚೆ ಮತ್ತು ಗ್ರಾಮ ಹೆಬ್ರಿ ತಾಲೂಕು  ಎಂಬಾತನನ್ನು ವಶಕ್ಕೆ ಪಡೆದು ಆತನ ಬಳಿ ಇದ್ದ 1300/- ರೂಪಾಯಿ ನಗದು, ಮಟ್ಕಾ ನಂಬ್ರ ಬರೆದ ಚೀಟಿ-1  ಹಾಗೂ ಬಾಲ್ ಪೆನ್ನು-1  ನ್ನು ಸ್ವಾಧೀನಪಡಿಸಿಕೊಂಡಿರುತ್ತಾರೆ
  • .ಈ ಬಗ್ಗೆ ಹೆಬ್ರಿ ಪೊಲೀಸ್‌ ಠಾಣೆಯಲ್ಲಿ ಕಲಂ: 78 (1)(111) KP ACT ರಂತೆ ಪ್ರಕರಣ ದಾಖಲಾಗಿರುತ್ತದೆ.

error: No Copying!