Spread the love

ಬಹುಷ್ಕಾರಕ್ಕೆ ಬಹಿಷ್ಕಾರವೇ ಮದ್ದೆಂದ ಕ್ರಾಂತಿಕಾರಿ, ಮಹಾತ್ಮಾ ಅಯ್ಯನ್ ಕಾಳಿ

ಬ್ರಹ್ಮರ್ಷಿ ನಾರಾಯಣ ಗುರುಗಳು, ಡಾ. ಪದ್ಮನಾಭನ್ ಪಲ್ಪು, ಕುಮಾರನ್ ಆಶಾನ್ ಮೊದಲಾದವರ ನೇತೃತ್ವದ ಎಸ್ ಎನ್ ಡಿ ಪಿ ಯ ಹೋರಾಟದಿಂದ ಸ್ಪೂರ್ತಿಪಡೆದಕೊಂಡ ಪ್ರಮುಖರಲ್ಲಿ ಅಯ್ಯನ್ ಕಾಳಿ ಒಬ್ಬರು. ಇವರು ಕೇರಳದ ತಿರುವನಂತಪುರ ಜಿಲ್ಲೆಯವರು.

1907ರಲ್ಲಿ “ಸಾಧು ಜನ ಪರಿಪಾಲನ ಯೋಗಂ” ಎಂಬ ಸಂಘಟನೆಯನ್ನು ಹುಟ್ಟು ಹಾಕಿ ಕಟ್ಟಿ ಬೆಳೆಸಿದ ಅಯ್ಯಂಕಾಳಿ ಅವರು, ಅಂದಿನ ತಿರುವಾಂಕೂರು ಸಂಸ್ಥಾನದ ಅಡಿಯಲ್ಲಿ ಮೇಲ್ಜಾತಿಯವರು ಎಂದು ಎನ್ನಿಸಿಕೊಂಡವರು ನಡೆಸಿಕೊಂಡುಬಂದ ಸಾಮಾಜಿಕ ಕ್ರೌರ್ಯ ಮತ್ತು ಅನ್ಯಾಯಗಳನ್ನು ತಲೆಎತ್ತಿ ಪ್ರಶ್ನಿಸುವುದರ ಜೊತೆಗೆ ಕ್ರಾಂತಿಕಾರಿ ಹೋರಾಟ ನಡೆಸಿ ಜಯ ಸಾಧಿಸಿದ ಧೀಮಂತ ಶಕ್ತಿ.

ಅಯ್ಯನ್ ಕಾಳಿಯವರು ಆಯೋಜಿಸಿದ ಸಭೆಗೆ ಆಗಮಿಸಿದ್ದ ಗಾಂಧೀಜಿಯವರು ಅಯ್ಯನ್ ಕಾಳಿಯವರ ಸಂಘಟನಾ ಶಕ್ತಿ, ಸಮಾಜ ಸುಧಾರಣ ಹೋರಾಟವನ್ನು ನೋಡಿ ಅಪಾರವಾಗಿ ಮೆಚ್ಚಿದರಲ್ಲದೆ “ಪುಲಯ್ಯ ರಾಜ” ಎಂದು ಬಹಿರಂಗಸಭೆಯಲ್ಲಿ ಕರೆದು ಅಭಿನಂದನೆ ಸಲ್ಲಿಸಿದ್ದರು. ಬಹಿಷ್ಕಾರಕ್ಕೆ ಬಹಿಷ್ಕಾರವೇ ಮದ್ದು ಎನ್ನುವ ರೀತಿಯಲ್ಲಿ ಹೋರಾಟ ನಡೆಸಿದ್ದರ ಫಲವಾಗಿ ತಿರುವಾಂಕೂರು ಸರಕಾರವು ಕೊನೆಗೆ ಅನಿವಾರ್ಯವಾಗಿ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗಾಗಿ ಶ್ರೀಮೂಲಂ ಪ್ರಜಾ ಪ್ರತಿನಿಧಿ ಸಭೆಯ ಸದಸ್ಯತ್ವವನ್ನು ನೀಡಬೇಕಾಗಿ ಬಂತು ಮತ್ತು ಬಳಿಕ ಬಹಳಷ್ಟು ಸುಧಾರಣೆಗಳನ್ನು ಹಂತ ಹಂತವಾಗಿ ಮಾಡಲೇಬೇಕಾದ ಅನಿವಾರ್ಯ ಪರಿಸ್ಥಿತಿ ಸವರ್ಣರ ತಿರುವಾಂಕೂರು ಸರಕಾರಕ್ಕೆ ಬಂದಿದಗಿತು. ಇವುಗಳೆಲ್ಲದಕ್ಕೂ ಅಯ್ಯಂಕಾಳಿ ನೇತೃತ್ವದ ಎಸ್ ಜೆ ಪಿ ಯೋಗಂನ ಕ್ರಾಂತಿಕಾರಿ ಹೋರಾಟವೇ ಕಾರಣವಾಯಿತು.

1866ರಲ್ಲಿ ಜನಿಸಿದ ಅಯ್ಯನ್ ಕಾಳಿ ತಮ್ಮ ಇಡೀ ಬದುಕನ್ನು ಸಮಾಜದ ಜನರ ವಿಮೋಚನೆಗಾಗಿ ಸವೆಸಿದರು. 1941ರ*ಬಹುಷ್ಕಾರಕ್ಕೆ ಬಹಿಷ್ಕಾರವೇ ಮದ್ದೆಂದ ಕ್ರಾಂತಿಕಾರಿ, ಮಹಾತ್ಮಾ ಅಯ್ಯನ್ ಕಾಳಿ*

# *ಬ್ರಹ್ಮರ್ಷಿ ನಾರಾಯಣ ಗುರುಗಳು, ಡಾ. ಪದ್ಮನಾಭನ್ ಪಲ್ಪು, ಕುಮಾರನ್ ಆಶಾನ್ ಮೊದಲಾದವರ ನೇತೃತ್ವದ ಎಸ್ ಎನ್ ಡಿ ಪಿ ಯ ಹೋರಾಟದಿಂದ ಸ್ಪೂರ್ತಿಪಡೆದಕೊಂಡ ಪ್ರಮುಖರಲ್ಲಿ ಅಯ್ಯನ್ ಕಾಳಿ ಒಬ್ಬರು. ಇವರು ಕೇರಳದ ತಿರುವನಂತಪುರ ಜಿಲ್ಲೆಯವರು.*

*1907ರಲ್ಲಿ “ಸಾಧು ಜನ ಪರಿಪಾಲನ ಯೋಗಂ” ಎಂಬ ಸಂಘಟನೆಯನ್ನು ಹುಟ್ಟು ಹಾಕಿ ಕಟ್ಟಿ ಬೆಳೆಸಿದ ಅಯ್ಯಂಕಾಳಿ ಅವರು, ಅಂದಿನ ತಿರುವಾಂಕೂರು ಸಂಸ್ಥಾನದ ಅಡಿಯಲ್ಲಿ ಮೇಲ್ಜಾತಿಯವರು ಎಂದು ಎನ್ನಿಸಿಕೊಂಡವರು ನಡೆಸಿಕೊಂಡುಬಂದ ಸಾಮಾಜಿಕ ಕ್ರೌರ್ಯ ಮತ್ತು ಅನ್ಯಾಯಗಳನ್ನು ತಲೆಎತ್ತಿ ಪ್ರಶ್ನಿಸುವುದರ ಜೊತೆಗೆ ಕ್ರಾಂತಿಕಾರಿ ಹೋರಾಟ ನಡೆಸಿ ಜಯ ಸಾಧಿಸಿದ ಧೀಮಂತ ಶಕ್ತಿ.*

*ಅಯ್ಯನ್ ಕಾಳಿಯವರು ಆಯೋಜಿಸಿದ ಸಭೆಗೆ ಆಗಮಿಸಿದ್ದ ಗಾಂಧೀಜಿಯವರು ಅಯ್ಯನ್ ಕಾಳಿಯವರ ಸಂಘಟನಾ ಶಕ್ತಿ, ಸಮಾಜ ಸುಧಾರಣ ಹೋರಾಟವನ್ನು ನೋಡಿ ಅಪಾರವಾಗಿ ಮೆಚ್ಚಿದರಲ್ಲದೆ “ಪುಲಯ್ಯ ರಾಜ” ಎಂದು ಬಹಿರಂಗಸಭೆಯಲ್ಲಿ ಕರೆದು ಅಭಿನಂದನೆ ಸಲ್ಲಿಸಿದ್ದರು. ಬಹಿಷ್ಕಾರಕ್ಕೆ ಬಹಿಷ್ಕಾರವೇ ಮದ್ದು ಎನ್ನುವ ರೀತಿಯಲ್ಲಿ ಹೋರಾಟ ನಡೆಸಿದ್ದರ ಫಲವಾಗಿ ತಿರುವಾಂಕೂರು ಸರಕಾರವು ಕೊನೆಗೆ ಅನಿವಾರ್ಯವಾಗಿ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗಾಗಿ ಶ್ರೀಮೂಲಂ ಪ್ರಜಾ ಪ್ರತಿನಿಧಿ ಸಭೆಯ ಸದಸ್ಯತ್ವವನ್ನು ನೀಡಬೇಕಾಗಿ ಬಂತು ಮತ್ತು ಬಳಿಕ ಬಹಳಷ್ಟು ಸುಧಾರಣೆಗಳನ್ನು ಹಂತ ಹಂತವಾಗಿ ಮಾಡಲೇಬೇಕಾದ ಅನಿವಾರ್ಯ ಪರಿಸ್ಥಿತಿ ಸವರ್ಣರ ತಿರುವಾಂಕೂರು ಸರಕಾರಕ್ಕೆ ಬಂದಿದಗಿತು. ಇವುಗಳೆಲ್ಲದಕ್ಕೂ ಅಯ್ಯಂಕಾಳಿ ನೇತೃತ್ವದ ಎಸ್ ಜೆ ಪಿ ಯೋಗಂನ ಕ್ರಾಂತಿಕಾರಿ ಹೋರಾಟವೇ ಕಾರಣವಾಯಿತು.*

*1866ರಲ್ಲಿ ಜನಿಸಿದ ಅಯ್ಯನ್ ಕಾಳಿ ತಮ್ಮ ಇಡೀ ಬದುಕನ್ನು ಸಮಾಜದ ಜನರ ವಿಮೋಚನೆಗಾಗಿ ಸವೆಸಿದರು. 1941ರ ಜೂನ್ 18ರಂದು ನಿಧನರಾದರು. ಶೋಷಿತ ಸಮುದಾಯದ ಪ್ರತಿಯೊಬ್ಬರೂ ಮರೆಯಲೇಬಾರದ ಧೀಮಂತ ಶಕ್ತಿ, ಮಹಾತ್ಮಾ ಅಯ್ಯನ್ ಕಾಳಿಯವರಾಗಿದ್ದಾರೆ. ಅವರಿಗೆ ಪ್ರಣಾಮಗಳು.*


18/06/2023 ಜೂನ್ 18ರಂದು ನಿಧನರಾದರು. ಶೋಷಿತ ಸಮುದಾಯದ ಪ್ರತಿಯೊಬ್ಬರೂ ಮರೆಯಲೇಬಾರದ ಧೀಮಂತ ಶಕ್ತಿ, ಮಹಾತ್ಮಾ ಅಯ್ಯನ್ ಕಾಳಿಯವರಾಗಿದ್ದಾರೆ. ಅವರಿಗೆ ಪ್ರಣಾಮಗಳು.

~ ಶ್ರೀರಾಮ ದಿವಾಣ, ಮೂಡುಬೆಳ್ಳೆ, ಉಡುಪಿ.

error: No Copying!