ಶಿರ್ವ: ದಿನಾಂಕ: 18-06-2023(ಹಾಯ್ ಉಡುಪಿ ನ್ಯೂಸ್) ಶಿರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಕುರ್ಕಾಲು ಪರಿಸರದಲ್ಲಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಮೂವರನ್ನು ಶಿರ್ವ ಪೊಲೀಸರು ಬಂಧಿಸಿದ್ದಾರೆ.
ಶಿರ್ವ ಪೊಲೀಸ್ ಠಾಣಾ ಪಿ.ಎಸ್.ಐ ಅನಿಲ್ ಕುಮಾರ್ ಟಿ ನಾಯಕ್ ರವರು ದಿನಾಂಕ:17-06-2023ರಂದು ಮಧ್ಯಾಹ್ನ ಠಾಣೆಯಲ್ಲಿದ್ದಾಗ ಕುರ್ಕಾಲು ಗ್ರಾಮದ ಬಗ್ಗೇಡಿಗುತ್ತು ನಾಗಬ್ರಹ್ಮಸ್ಥಾನದ ಬಳಿ ವ್ಯಕ್ತಿಗಳು ಸೇರಿಕೊಂಡು ಗಾಂಜಾವನ್ನು ಮಾರಾಟ ಮಾಡುವ ಪ್ರಯತ್ನದಲ್ಲಿದ್ದಾರೆ ಎಂದು ಗುಪ್ತ ಮಾಹಿತಿ ಬಂದಿದ್ದು ಮಾಹಿತಿ ಪಡೆದ ಕೂಡಲೇ ಪೊಲೀಸ್ ಸಿಬ್ಬಂದಿಗಳ ಜೊತೆಗೆ ಮಾಹಿತಿ ಬಂದ ಸ್ಥಳವಾದ ಕುರ್ಕಾಲು ಗ್ರಾಮದ ಬಗ್ಗೇಡಿಗುತ್ತು ನಾಗಬ್ರಹ್ಮಸ್ಥಾನದ ಬಳಿ ತೆರಳುತ್ತಾರೆ.
ಸ್ಥಳದಲ್ಲಿ ಪೊಲೀಸರನ್ನು ಕಂಡು ತಪ್ಪಿಸಿಕೊಂಡು ಹೋಗಲು ಪ್ರಯತ್ನಿಸಿದ ಆಪಾದಿತರಾದ ಪ್ರೇಮನಾಥ್ ಯಾನೆ ರೇವ್, ಸಂಪತ್ ಬಂಗೇರ ಮತ್ತು ಮುದಸ್ಸಿರ ಎಂಬವರನ್ನು ವಶಕ್ಕೆ ಪಡೆದು ಪ್ರೇಮನಾಥ್ ಯಾನೆ ರೇವ್ ಎಂಬಾತನ ವಶದಲ್ಲಿದ್ದ 142.92 ಗ್ರಾಂ ಮಾದಕ ವಸ್ತು (ಅಂದಾಜು ಮೌಲ್ಯ 5000) ಮತ್ತು 2 ಖಾಲಿ ಪ್ಲಾಸ್ಟಿಕ್ ಕವರ್,, ಒಪ್ಪೋ ಕಂಪೆನಿ ತಯಾರಿಕೆಯ ತಿಳಿ ನೀಲಿ ಬಣ್ಣದಮೊಬೈಲ್ -1 (ಅಂದಾಜು ಮೌಲ್ಯ 3000),ನೋಕಿಯಾ ಕಂಪೆನಿಯ ಕಪ್ಪು ಬಣ್ಣದ ಕೀ ಪ್ಯಾಡ್ ಮೊಬೈಲ್ (ಅಂದಾಜು ಮೌಲ್ಯ 1000), 100 ರೂಪಾಯಿ ಮುಖಬೆಲೆಯ ಎರಡು ನೋಟು, ಮತ್ತು ಡ್ರಾಗನ್-1 ನಂತರ ಸಂಪತ್ ಬಂಗೇರ ಎಂಬಾತನಲ್ಲಿ ಎರಡು ನೂರು ರೂಪಾಯಿ ಮುಖ ಬೆಲೆಯ ಒಂದು ನೋಟು ಮತ್ತು 2ಖಾಲಿ ಪ್ಲಾಸ್ಟಿಕ್ ಕವರ್ , ಹೀರೋ ಕಂಪೆನಿಯ ಕೀಪ್ಯಾಡ್ ಸೆಟ್-1 (ಮೌಲ್ಯ 1000), ಕಬ್ಬಿಣದ ಚೂರಿ-1 ,ಮುದಸ್ಸಿರ ಈತನ ವಶದಲ್ಲಿ ನೂರು ರೂಪಾಯಿ ಮುಖಬೆಲೆಯ ಎರಡು ನೋಟು ಮತ್ತು 2 ಖಾಲೀ ಪ್ಲಾಸ್ಟಿಕ್ ಕವರ್ , ಸ್ಯಾಮ್ ಸಂಗ್ ಕಂಪೆನಿ ತಯಾರಿಕೆಯ ಕಪ್ಪು ಬಣ್ಣದ ಮೊಬೈಲ್-1 ಇದ್ದು (ಮೌಲ್ಯ 5000/-) ಹಾಗೂ ಆಪಾದಿತರುಗಳು ಕೃತ್ಯಕ್ಕೆ ಬಳಸಿದ ಕೃತ್ಯ ಸ್ಥಳದಲ್ಲಿದ್ದ ಮಾರುತಿ ಸುಜುಕಿ ಕಂಪೆನಿಯ ಸ್ವಿಫ್ಟ್ ನೀಲಿಬಣ್ಣದ ಕಾರು ನಂ KA 20ME1508 (ಮೌಲ್ಯ 300000), ಸುಜುಕಿ ಕಂಪೆನಿಯ ಕಪ್ಪು ಬಣ್ಣದ ಮೋಟಾರು ಸೈಕಲ್ ನಂ KA20L2201 (ಮೌಲ್ಯ 20000), ನೀಲಿ ಬಣ್ಣದ ಟರ್ಪಾಲು ಇವೆಲ್ಲ ಸೊತ್ತುಗಳನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಕಲಂ 8(c), 20(b), ii(a) NDPS ACT 1985 ರಂತೆ ಪ್ರಕರಣ ದಾಖಲಾಗಿದೆ.