ಮಣಿಪಾಲ: ದಿನಾಂಕ 17/06/2023 (ಹಾಯ್ ಉಡುಪಿ ನ್ಯೂಸ್) ಈಶ್ವರ ನಗರದಲ್ಲಿ ಮಾದಕ ದ್ರವ್ಯ ಮಾರಾಟ ಮಾಡಲು ಬಂದಿದ್ದ ಇಬ್ಬರು ಯುವಕರನ್ನು ಮಣಿಪಾಲ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ದೇವರಾಜ್ ಟಿ ವಿ ರವರು ಬಂಧಿಸಿದ್ದಾರೆ.
ಮಣಿಪಾಲ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ದೇವರಾಜ್ ಟಿ.ವಿ ಅವರಿಗೆ ದಿನಾಂಕ:16-06-2023ರಂದು ಉಡುಪಿ ತಾಲೂಕು ಹೆರ್ಗಾ ಗ್ರಾಮದ ಈಶ್ವರ ನಗರ 2 ನೇ ಮುಖ್ಯ ರಸ್ತೆಯ 20 ನೇ ಅಡ್ಡ ರಸ್ತೆಯ ಬಳಿ ಮೋಟಾರು ಸೈಕಲಿನಲ್ಲಿ ಇಬ್ಬರು ವ್ಯಕ್ತಿಗಳು ಕುಳಿತು ಮಾದಕ ದ್ರವ್ಯ ಮಾರಾಟ ಮಾಡುವ ಉದ್ದೇಶದಿಂದ ಬಂದಿರುವ ಖಚಿತ ವರ್ತಮಾನದಂತೆ ಕೂಡಲೇ ದಾಳಿ ನಡೆಸಿ ಆರೋಪಿಗಳಾದ ನಿಭಿಶ್ ಕೆ ಸಂತೋಷ (23), ಮತ್ತು ಅಮಲ್ ಎಮ್ (22) ಎಂಬವರನ್ನು ಬಂಧಿಸಿ ವಶಕ್ಕೆ ಪಡೆದಿದ್ದಾರೆ.
ಆಪಾದಿತ ನಿಭಿಶ್ ಕೆ ಸಂತೋಷ ಆತನ ವಶದಲ್ಲಿದ್ದ 4.2 ಗ್ರಾಂ (ಪ್ಲಾಸ್ಟಿಕ್ ಕವರ್ ಸಮೇತ) ಮೆತಮ್‌ಪೆಟಮೈನ್ (Mathamphetamine) ಮಾದಕ ದ್ರವ್ಯ ಮೌಲ್ಯ 21,000/- ಮತ್ತು ಆಪಾದಿತ ಅಮಲ್ ಎಮ್ ಎಂಬಾತನ ವಶದಲ್ಲಿದ್ದ 3.4 ಗ್ರಾಂ (ಪ್ಲಾಸ್ಟಿಕ್ ಕವರ್ ಸಮೇತ) ಮೆತಮ್‌ಪೆಟಮೈನ್ (Mathamphetamine) ಮಾದಕ ದ್ರವ್ಯ ಮೌಲ್ಯ 17,000/- , ಅಲ್ಲದೇ ಆಪಾದಿತರ ವಶದಲ್ಲಿದ್ದ KL-51-L-3532 ಮೋಟಾರ್ ಸೈಕಲ್ ಮೌಲ್ಯ 1,25,000/- . IPHONE (1) ಕಂಪನಿಯ ಮೊಬೈಲ್ ಪೋನ್ ಮೌಲ್ಯ 1,25,000/- , NOTHING PHONE (1) ಕಂಪೆನಿಯ ಮೊಬೈಲ್ ಪೋನ್ ಮೌಲ್ಯ 25,000/- ಹಾಗೂ 7 ಖಾಲಿ ಪ್ಲಾಸ್ಟಿಕ್ ಕವರ್ ಗಳನ್ನು ಮಣಿಪಾಲ ಪೊಲೀಸರು ಸ್ವಾಧೀನಪಡಿಸಿಕೊಂಡಿರುತ್ತಾರೆ.
ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಕಲಂ:8(c) 22(b) NDPS ರಂತೆ ಪ್ರಕರಣ ದಾಖಲಾಗಿದೆ.